×
Ad

ಈದ್ ಮಿಲನ್ ಸ್ಪೋರ್ಟ್ಸ್: ಮಲಾರ್ ಚಾಂಪಿಯನ್

Update: 2017-07-17 20:05 IST

ಮಂಗಳೂರು, ಜು.17: ಪಿಎಫ್‌ಐ ಉಳ್ಳಾಲ ವಲಯದ ವತಿಯಿಂದ ಮಲಾರ್ ಮೈದಾನದಲ್ಲಿ ರವಿವಾರ ನಡೆದ ಈದ್ ಮಿಲನ್ ಸ್ಪೋರ್ಟ್ಸ್‌ನಲ್ಲಿ ಮಲಾರ್ ತಂಡವು 6 ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿವೆ.

ಪಿಎಫ್‌ಐ ಜಿಲ್ಲಾಧ್ಯ್ಯಕ್ಷ ನವಾಝ್ ಉಳ್ಳಾಲ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಂಝೀಲ್ ಉಳ್ಳಾಲ ಪ್ರಾಸ್ತಾವಿಕ ಮಾತುಗಳನ್ನಾಡಿ ಕ್ರೀಡೆ ಕೇವಲ ಆಟವಲ್ಲ. ಅದರಲ್ಲಿ ಹಲವು ರೋಗದ ಶಮನಕ್ಕೆ ಔಷಧಿಯಿದೆ. ಹಾಗಾಗಿ ಕ್ರೀಡೆಯನ್ನು ಜನ ಮನಸ್ಸುಗಳ ಮುಂದೆ ಪೊತ್ಸಾಹ ನಿಡುವಂತಾಗಬೇಕು ಎಂದರು.

ಉಳ್ಲಾಲ ವಲಯಾಧ್ಯಕ್ಷ ಸಿದ್ದೀಕ್ ಉಳ್ಳಾಲ, ಕಾರ್ಯದರ್ಶಿ ಬಶೀರ್ ಎಸ್.ಎಮ್., ಎಸ್‌ಡಿಪಿಐ ಮಂಗಳೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಅಬ್ಬಾಸ್ ಕಿನ್ಯ, ಸಿದ್ದೀಕ್ ಉಳ್ಳಾಲ, ಹಾರಿಸ್ ಮಲಾರ್ ರವೂಫ್ ಉಳ್ಳಾಲ, ನಾಸಿರ್ ಮಲಾರ್, ಶರೀಫ್ ಕೊಣಾಜೆ, ಲತೀಫ್ ಕೋಡಿಜಾಲ್, ರಿಯಾಝ್ ಪನೀರ್ ಪಾಲ್ಗೊಂಡಿದ್ದರು.

ಝಾಯಿದ್ ಮಲಾರ್ ಸ್ವಾಗತಿಸಿದರು. ಸಿದ್ದಿಕ್ ಕುಂಪಲ ವಂದಿಸಿದರು. ಹಾರಿಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News