ಬಸ್ ಅಪಘಾತ: ಹಲವು ಪ್ರಯಾಣಿಕರಿಗೆ ಗಾಯ
Update: 2017-07-17 21:40 IST
ಕಾಪು, ಜು.17: ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಡಿಗೆ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ ಹಲವು ಮಂದಿ ಪ್ರಯಾಣಿಕರು ಗಾಯ ಗೊಂಡ ಘಟನೆ ಕಟಪಾಡಿ- ಮಣಿಪುರ ರಸ್ತೆಯ ಚೊಕ್ಕಾಡಿ ರೈಲ್ವೆ ಸೇತುವೆಯ ಬಳಿ ಇಂದು ಬೆಳಗ್ಗೆ ನಡೆದಿದೆ.
ಅಪಘಾತದಿಂದ ಬಸ್ಸಿನಲ್ಲಿದ್ದ ಅಪ್ಪಿ ಮರಕಾಲ್ತಿ (65), ಆಯೂಬ್(40), ಆಸ್ಮಾ(37), ರುಬಿನಾ(27), ಕೃಷ್ಣಪ್ಪ(43), ವಾರಿಜಾ, ರೆಹನಾ, ರವಿ, ಸರಿತಾ, ಮುಜಾಹಿರ್ ಉಮಾತ್ಮ ಹಾಗೂ ಒಂದು ಮಗು ಸಹಿತ ಒಟ್ಟು 13 ಮಂದಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಮಣಿಪುರದಿಂದ ಕಟಪಾಡಿಗೆ ಬರುತ್ತಿದ್ದ ಶ್ರೀ ಗಣೇಶ್ ಖಾಸಗಿ ಬಸ್, ಸ್ಟೇರಿಂಗ್ ವೀಲ್‌ನ ಎಂಡ್ ಮುರಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆಯ ಬದಿಗೆ ತೋಡಿಗೆ ಇಳಿದು ಮರಗಳಿಗೆ ಢಿಕ್ಕಿ ಹೊಡೆದು ನಿಂತಿತ್ತೆನ್ನಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.