×
Ad

ಪಡಿತರ ಚೀಟಿ: ಸ್ವಯಂ ಮುದ್ರಣ ಸೇವೆ ಪ್ರಾರಂಭ

Update: 2017-07-17 21:43 IST
ಸಾಂದರ್ಭಿಕ ಚಿತ್ರ

ಮಂಗಳೂರು, ಜು.17: ಸರಕಾರವು ಪಡಿತರ ಚೀಟಿದಾರರ ಅನುಕೂಲಕ್ಕಾಗಿ ಫೋಟೋ ಬಯೋ ಸೆಂಟರ್‌ಗಳಲ್ಲಿ ಪಡಿತರ ಚೀಟಿ ಸೇವೆಗಳು (ಸ್ವಯಂ ಮುದ್ರಣ) ಎಂಬ ಸೇವೆಯನ್ನು ಪ್ರಾರಂಭಿಸಿದೆ. ಪಡಿತರ ಚೀಟಿದಾರರು ಫೋಟೋ ಬಯೋ ಸೆಂಟರ್‌ಗಳಲ್ಲಿ ಪಡಿತರ ಸಾಮಗ್ರಿಗಳ ನಿರಾಕರಣೆ, ನ್ಯಾಯಬೆಲೆ ಅಂಗಡಿ ಬದಲಾವಣೆ, ಪಡಿತರ ಚೀಟಿಯಿಂದ ಹೆಸರು ತೆಗೆದು ಹಾಕುವುದು ಹಾಗೂ ಪಡಿತರ ಚೀಟಿ ಉನ್ನತೀಕರಣಕ್ಕಾಗಿ (upgradation of card) ಕೋರಿಕೆ ಸಲ್ಲಿಸಬಹುದು. ಪಡಿತರ ಸಾಮಗ್ರಿಗಳ ವಿತರಣೆಗೆ ಕೋರಿಕೆಯನ್ನು ಮುಂದಿನ ಕ್ರಮಕ್ಕಾಗಿ ಆಹಾರ ನಿರೀಕ್ಷಕರ ಲಾಗಿನ್‌ಗೆ ಕಳುಸಲಾಗುತ್ತದೆ.

ಪಡಿತರ ನಿರಾಕರಣೆಗೆ ಕೋರಿಕೆ ಸಲ್ಲಿಸಿದವರಿಗೆ ಪಡಿತರ ಸಾಮಗ್ರಿ ದೊರೆಯದಿದ್ದಲ್ಲಿ ನ್ಯಾಯಬೆಲೆ ಅಂಗಡಿ ಬದಲಾವಣೆ, ಹೆಸರು ಕಳಚುವುದು ಹಾಗೂ ಪಡಿತರ ಚೀಟಿ ಉನ್ನತೀಕರಣಗಳ ಕೋರಿಕೆಯನ್ನು ಸೇವಾ ಕೇಂದ್ರದಲ್ಲಿಯೇ ಮಾಡಿ ಕೊಡಲಾಗುತ್ತದೆ. ಈ ರೀತಿ ಬದಲಾವಣೆ ಆದ ಪಡಿತರ ಚೀಟಿ ಮುದ್ರಿತ ಪ್ರತಿಯನ್ನು ಫೋಟೋ ಬಯೋ ಕೇಂದ್ರದಿಂದ ಪಡೆದುಕೊಳ್ಳಬಹುದು. ಪಡಿತರ ಚೀಟಿದಾರರು ಸ್ಪೀಡ್ ಪೋಸ್ಟ್ ಮೂಲಕ ಪಡಿತರ ಚೀಟಿ ಮುದ್ರಿತ ಪ್ರತಿ ಅಗತ್ಯದ್ದಲ್ಲಿ ಫೋಟೋ ಬಯೋ ಕೇಂದ್ರದಲ್ಲಿ ಪಡಿತರ ಚೀಟಿಯಲ್ಲಿ ವಿಳಾಸದ/ಸದಸ್ಯರ/ಅಂಗಡಿಯ ಬದಲಾವಣೆ (ಅಂಚೆ ತರಣೆಯೊಂದಿಗೆ ಹಾಲಿ ಪಡಿತರ ಚೀಟಿಗಾಗಿ ಮಾತ್ರ) ಆಯ್ಕೆ ಮಾಡಿಕೊಂಡಲ್ಲಿ ಬದಲಾವಣೆ ಆದ ಪಡಿತರ ಚೀಟಿಯ ಮುದ್ರಿತ ಪ್ರತಿಯು ಸ್ಪೀಡ್ ಪೋಸ್ಟ್ ಮೂಲಕ ಪಡಿತರ ಚೀಟಿದಾರರ ವಿಳಾಸಕ್ಕೆ ಬರುತ್ತದೆ. ಆದುದರಿಂದ ಪಡಿತರ ಚೀಟಿದಾರರು ತಮ್ಮ ಸಮೀಪದ ಫೋಟೋ ಬಯೋ ಸೆಂಟರ್‌ನಿಂದ ಈ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News