×
Ad

ಪಾಕ್: ಉಗ್ರ ದಾಳಿಯಲ್ಲಿ 3 ಸೈನಿಕರ ಸಾವು

Update: 2017-07-17 21:44 IST

ಪೇಶಾವರ (ಪಾಕಿಸ್ತಾನ), ಜು. 17: ಪಾಕಿಸ್ತಾನದಲ್ಲಿ ಗಡಿ ಸೈನಿಕರನ್ನು ಗುರಿಯಾಗಿಸಿ ಸೋಮವಾರ ನಡೆದ ಎರಡು ದಾಳಿಗಳಲ್ಲಿ ಕನಿಷ್ಠ ಮೂವರು ಸೈನಿಕರು ಮೃತಪಟ್ಟಿದ್ದಾರೆ ಹಾಗೂ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

 ಪೇಶಾವರದಲ್ಲಿ ನಡೆದ ಮೊದಲ ಘಟನೆಯಲ್ಲಿ ತಾಲಿಬಾನ್‌ನ ಓರ್ವ ಆತ್ಮಹತ್ಯಾ ಬಾಂಬರ್ ತನ್ನ ಮೋಟರ್ ಸೈಕಲನ್ನು ಫ್ರಂಟಿಯರ್ ಕಾರ್ಪ್ಸ್‌ನ ವಾಹವನೊಂದಕ್ಕೆ ಢಿಕ್ಕಿ ಹೊಡೆಸಿದನು. ಇದರಲ್ಲಿ ಇಬ್ಬರು ಸೈನಿಕರು ಮೃತಪಟ್ಟರು ಹಾಗೂ ಏಳು ಮಂದಿ ಗಾಯಗೊಂಡರು.

ಕೆಲವು ಗಂಟೆಗಳ ಬಳಿಕ ಎರಡನೆ ಆತ್ಮಹತ್ಯಾ ಬಾಂಬರ್ ಬಲೂಚಿಸ್ತಾನ ಪ್ರಾಂತದ ಗಡಿ ಪಟ್ಟಣ ಚಮನ್‌ನಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡಾಗ ಓರ್ವ ಗಡಿ ಸೈನಿಕ ಮೃತಪಟ್ಟರು ಹಾಗೂ ಇನ್ನೋರ್ವ ಗಾಯಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News