ವಂಚನೆ: ಆರೋಪಿಗಳಿಗೆ ನ್ಯಾಯಾಂಗ ಬಂಧನ
Update: 2017-07-17 21:46 IST
ಉಡುಪಿ, ಜು.17: ಪಡುಬೆಳ್ಳೆಯ ಶಂಕರ ಆಚಾರ್ಯ ನಕಲಿ ಚಿನ್ನಾಭರಣ ಅಡವಿಟ್ಟು ಇನ್ನಂಜೆ ಸಹಕಾರಿ ಬ್ಯಾಂಕಿನ ಕುರ್ಕಾಲು ಶಾಖೆಗೆ ಲಕ್ಷಾಂತರ ರೂ. ವಂಚನೆ ಎಸಗಿರುವ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಆರೋಪಿಗಳಿಗೆ ಉಡುಪಿ ನ್ಯಾಯಾಲಯವು ಜು.28ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಬಂಧಿತ ಆರೋಪಿಗಳಾದ ಕುರ್ಕಾಲು ಶಾಖೆಯ ವ್ಯವಸ್ಥಾಪಕ ಇನ್ನಂಜೆಯ ಉಮೇಶ್ ಅಮೀನ್(35) ಹಾಗೂ ಕುಂಜಾರುಗಿರಿಯ ಸರಾಪರ್ ಉಮೇಶ್ ಆಚಾರ್ಯ(35) ಎಂಬವರನ್ನು ಪೊಲೀಸರು ಇಂದು ಉಡುಪಿ ನ್ಯಾಯಾ ಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.