ತುಳುನಾಡಿನ ಸಂಸ್ಕೃತಿ, ಪಾಡ್ದನ, ತಿಂಡಿತಿನಿಸುಗಳು ನಾಶ: ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ವಿ.ಮನೋಹರ್

Update: 2017-07-18 13:18 GMT

ಉಡುಪಿ, ಜು.18: ತುಳುನಾಡಿನಲ್ಲಿ ಸುಮಾರು 30ವರ್ಷಗಳ ಹಿಂದೆ ಚಾಲ್ತಿಯಲ್ಲಿದ್ದ ಸಂಸ್ಕೃತಿ, ಪಾಡ್ದನ, ತಿಂಡಿ ತಿನಿಸುಗಳು ಹಾಗೂ ಸಸ್ಯರಾಶಿಗಳು ನಾಶವಾಗಿವೆ. ಇಂತಹ ಆಟಿಡೊಂಜಿ ದಿನ ಕಾರ್ಯಕ್ರಮಗಳ ಮೂಲಕ ಅದಕ್ಕೆ ಮತ್ತೆ ಚಾಲನೆ ಕೊಡುವ ಕೆಲಸ ಮಾಡಬಹುದಾಗಿದೆ ಎಂದು ಸಂಗೀತ ನಿರ್ದೇಶಕ ವಿ. ಮನೋಹರ್ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಂಟರ ಯಾನೆ ನಾಡವರ ಮಾತೃ ಸಂಘ ತಾಲೂಕು ಸಮಿತಿ, ಬಂಟರ ಸಂಘದ, ಲಯನೆಸ್ ಟೀಮ್ ಡ್ರೀಮ್ ಲಯನ್ಸ್ ಜಿಲ್ಲೆ, ಮಲ್ಪೆ ಲಯನ್ಸ್ ಮತ್ತು ಲಯನೆಸ್ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಆಯೋಜಿಸಲಾದ ಆಷಾಢದಲ್ಲೊಂದು ದಿನ -ಮಹಿಳೆಯರ ಕೂಟದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮಾತ ನಾಡಿ, ಇಂದು ಆಧುನಿಕತೆಯ ಭರಾಟೆಯಲ್ಲಿ ಅವನತಿಯ ಹಂತಕ್ಕೆ ತಲುಪಿ ರುವ ನಮ್ಮ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಯಾಗಿದೆ. ಆಟಿಯ ತಿಂಗಳು ಕಷ್ಟ ದಿನಗಳಾಗಿದ್ದವು. ಅವುಗಳನ್ನು ಇಂದು ಒಳ್ಳೆಯ ದಿನಗಳಂತೆ ತೋರಿಸಲಾಗುತ್ತಿದೆ ಎಂದರು.

ಲಯನ್ಸ್ ಜಿಲ್ಲಾ ಸಂಯೋಜಕಿ ವಿದ್ಯಾಲತಾ ಉದಯ ಕುಮಾರ್ ಶೆಟ್ಟಿ, ಮಲ್ಪೆ ಲಯನ್ಸ್ ಅಧ್ಯಕ್ಷೆ ಗಿರಿಜಾ ಶಿವರಾಮ ಶೆಟ್ಟಿ, ಬಂಟರ ಸಂಘದ ಗೌರವ ಅಧ್ಯಕ್ಷ ಕೊಡಂಕೂರು ಜಯರಾಮ ಶೆಟ್ಟಿ, ಮೋಹನ್ ಶೆಟ್ಟಿ, ಜಯಲಕ್ಷ್ಮಿ ನಾಗಪ್ಪ ಅಮೀನ್ ಮುಖ್ಯ ಅತಿಥಿಗಳಾಗಿದ್ದರು. ಇದೇ ಸಂದರ್ಭದಲ್ಲಿ ಆಟೋಟ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸರಳಾ ಕಾಂಚನ್, ವಸಂತಿ ರಾವ್ ಕೊರಡ್ಕಲ್, ಮಮತಾ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. ಒಕ್ಕೂಟದ ತಾಲೂಕು ಅಧ್ಯಕ್ಷೆ ಶೀಲಾ ಕೆ.ಶೆಟ್ಟಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಯಶೋಧಾ ಜೆ.ಶೆಟ್ಟಿ ಸ್ವಾಗತಿಸಿದರು. ಗೀತಾ ರವಿ ವಂದಿಸಿದರು. ಮಾಲಿನಿ ಶೆಟ್ಟಿ ಮತ್ತು ಸುಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಜಾನಪದ ಮನರಂಜನಾ ಕಾರ್ಯಕ್ರಮಗಳು ಜರಗಿದವು.

ತುಳುನಾಡಿನ ಖಾದ್ಯಗಳ ರುಚಿ
ಆಟಿಡೊಂಜಿ ದಿನ ಭೋಜನದಲ್ಲಿ ತುಳುನಾಡಿನ ಖಾದ್ಯಗಳಾದ ಮೂಡೆ, ಅರಸಿನ ಎಲೆಯ ಕಡುಬು, ತೊಜಿಂಕ್ ಪಲ್ಯ, ಹಲಸಿನ ಕಡುಬು, ಪತ್ರೋಡೆ, ಕೆಸುವಿನ ಚಟ್ನಿ, ತಿಮರೆ, ಮಾವಿನ ಕಾಯಿಯ ಚಟ್ನಿ, ಹುರುಳಿ ಸಾರು, ಚಿಲಿಂಬಿದ ಅಡ್ಡೆ, ಪಾಯಸ, ಸೌತೆ ಪದೆಂಗಿ ಗಸಿ, ಮೊಸರು ಮತ್ತು ಉಪ್ಪಿನ ಕಾಯಿ, ತೊಜಿಂಕ್ ವಡೆ, ಉಪ್ಪಡ್ ಪಚ್ಚಿರ್ ಪಲ್ಯ, ಹಲಸಿನ ಮುಳ್ಕ, ಹಲಸಿನ ತೊಳೆ, ಕಣಿಲೆ ಕಡ್ಲೆ ಗಸಿ, ತೇವು ಪದಪೆ ಗಸಿ, ಪೆಜಕಾಯಿ ಚಟ್ನಿ, ಅನ್ನ, ಮಾವಿನಹಣ್ಣಿನ ಮೆಣಸ್‌ಕಾಯಿ ರುಚಿಯನ್ನು ಸವಿಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News