×
Ad

ಶೇ.3ರ ಮೀಸಲು ನಿಧಿ ವಿತರಣಾ ಕಾರ್ಯಕ್ರಮ

Update: 2017-07-18 19:26 IST

ಮಂಗಳೂರು, ಜು.18: ಅಂಗವಿಕಲರನ್ನು  ಗುರುತಿಸಿ ಅವರ ಜೀವನ ನಿರ್ವಹಣೆಗೆ ನೆರವಾಗುವ ಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶದ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದು ಮನಪಾ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ನಾಗವೇಣಿ ತುಳಿಸಿದ್ದಾರೆ.

ಮನಪಾ ವ್ಯಾಪ್ತಿಯೊಳಗೆ ವಾಸಿಸುವ ಅಂಗವಿಕಲರಿಗೆ ಮತ್ತು ಅಂಗವಿಕಲರ ಪೋಷಣೆಯನ್ನು ಮಾಡುತ್ತಿರುವವರಿಗೆ ಮನಪಾ ಶೇ. 3 ಮೀಸಲು ನಿಧಿ ಅನುಧಾನದಡಿಯಲ್ಲಿ ವಿವಿಧ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.

ಮನಪಾ ಅಧಿಕಾರಿ ಗುಣಶೇಖರ ಕಾಪೋ ಮಾತನಾಡಿ ಅಂಗವಿಕಲರು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಈಗಾಗಲೇ 2016-17ನೇ ಸಾಲಿನಲ್ಲಿ ಶೇ 3ರ ಅನುದಾನದಡಿ ಫಲಾನುಭವಿಗಳಿಗೆ ಟ್ರೈಸೈಕಲ್, ಸ್ಕೂಟರ್, ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ ಎಂದರು.

ಕಾರ್ಪೋರೇಟರ್ ಅಪ್ಪಿ, ಆಶಾ ಡಿಸಿಲ್ವ, ದೀಪಕ್ ಪೂಜಾರಿ, ಜಯಂತಿ ಆಚಾರಿ, ಮನಪಾ ನಗರ ಬಡತನ ನಿರ್ಮೂಲನಾ ಕೋಶದ ಸಮುದಾಯ ವ್ಯವಹಾರ ಅಧಿಕಾರಿ ಮಾಲಿನಿ ರೊಡ್ರಿಗಸ್, ವ್ಯವಸ್ಥಾಪಕ ಅಚ್ಯುತ ನಾಯ್ಕ್ ಮೂಡುಬಗೆ ಮತ್ತು ಚಿತ್ತರಂಜನದಾಸ್, ಭವಾನಿಶಂಕರ್, ಪ್ರಮೀಳಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News