ಅಕ್ರಮ ಅನಿಲ ಸಿಲಿಂಡರ್‌ಗಳ ಪತ್ತೆ
Update: 2017-07-18 19:31 IST
ಮಂಗಳೂರು, ಜು.18: ನಗರದ ಕುಲಶೇಖರ-ಕಲ್ಪನೆ ಕೋರ್ಡೆಲ್ ಚರ್ಚ್ ಕಾಂಪೌಂಡಿನ ಬಳಿ ಇರುವ ಮನೆಗೆ ದಾಳಿ ಮಾಡಿದ ಮಂಗಳೂರು ಅನೌಪಚಾರಿಕ ಪಡಿತರ ಕಚೇರಿಯ ಸಹಾಯಕ ನಿರ್ದೇಶಕರು, ಆಹಾರ ನಿರೀಕ್ಷಕರು ಮತ್ತು ಕದ್ರಿ ಪೊಲೀಸ್ ಠಾಣಾ ಸಿಬ್ಬಂದಿ ವರ್ಗ 32 ಗೃಹ ಬಳಕೆಯ ಮತ್ತು 9 ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಮನೆಯ ಬಾಡಿಗೆದಾರ ಅನಂತರಾಜ್ ಆರ್. ಅವರಿಗೆ ಸೇರಿದ ಸಿಲಿಂಡರುಗಳು ಇದಾಗಿದ್ದು, ಈ ಬಗ್ಗೆ ಯಾವುದೇ ದಾಖಲೆಗಳನ್ನು ಹಾಜರು ಪಡಿಸಲು ವಿಫಲರಾಗಿರುವುದರಿಂದ, ಅನಧಿಕೃತ ದಾಸ್ತಾನು ಮಾಡಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಉದ್ದೇಶಿಸಿರುವ ಆರೋಪದ ಮೇರೆಗೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.