ಬಂಟ್ಸ್ ಹಾಸ್ಟೆಲ್ ಗಣೇಶೋತ್ಸವ ಸಮಿತಿಗೆ ಆಯ್ಕೆ
ಮಂಗಳೂರು, ಜು.18: ಶ್ರೀ ಸಿದ್ದಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ನಗರದ ಬಂಟ್ಸ್ ಹಾಸ್ಟೆಲ್‌ನಲ್ಲಿ ನಡೆಯಲಿರುವ 14ನೆ ವರ್ಷದ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಎಂ. ಸುಂದರ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ದಿವಾಕರ ಸಾಮಾನಿ ಚೇಳ್ಯಾರ್‌ಗುತ್ತು, ಜತೆ ಕಾರ್ಯದರ್ಶಿಯಾಗಿ ಸುಖೇಶ್ ಚೌಟ, ಉಮೇಶ್ ಶೆಟ್ಟಿ, ವಿದ್ಯಾ ಸಿ. ಶೆಟ್ಟಿ, ಕೋಶಾಧಿಕಾರಿಯಾಗಿ ಆನಂದ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ಸುಲತಾ ಜೆ. ಶೆಟ್ಟಿ, ಪ್ರಕಾಶ್ ಮೇಲಾಂಟ, ಸಂಘಟನಾ ಕಾರ್ಯದರ್ಶಿಗಳಾಗಿ ಜಯಶೀಲ ಅಡ್ಯಂತಾಯ, ಪ್ರಥಮ್ ಭಂಡಾರಿ, ಜಗದೀಶ್ ಶೆಟ್ಟಿ ಬಿಜೈ, ಸದಾಶಿವ ಶೆಟ್ಟಿ, ರಘುನಾಥ ಶೆಟ್ಟಿ, ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್, ಹರೀಶ್ ಶೆಟ್ಟಿ ಬಜಪೆ, ಭವ್ಯ ಶೆಟ್ಟಿ ಸುರತ್ಕಲ್, ಕಿರಣ್ ಪಕ್ಕಳ, ಸಂತೋಷ್ ಶೆಟ್ಟಿ ಶೆಡ್ದೆ, ಜಯಶ್ರೀ ರೈ, ಪರಿಣಿತಾ ಹೆಗ್ಡೆ ಆಯ್ಕೆಯಾದರು.
ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಹಾಗೂ ಸಿದ್ದಿ ನಾಯಕ ಪ್ರತಿಷ್ಠಾನದ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ, ಟ್ರಸ್ಟಿಗಳಾದ ಶೆಡ್ಡೆ ಮಂಜುನಾಥ ಭಂಡಾರಿ, ರವಿರಾಜ ಶೆಟ್ಟಿ, ಕೃಷ್ಣ ಪ್ರಸಾದ್ ರೈ, ಡಾ. ಆಶಾಜ್ಯೋತಿ ರೈ ಮತ್ತಿತರರು ಉಪಸ್ಥಿತರಿದ್ದರು.