×
Ad

ಉಪ್ಪಿನಂಗಡಿ ಘಟಕದಿಂದ ವನಮಹೋತ್ಸವ

Update: 2017-07-18 19:40 IST

ಮಂಗಳೂರು, ಜು.18: ಉಪ್ಪಿನಂಗಡಿ ಗೃಹ ರಕ್ಷಕದಳದಿಂದ ಉಪ್ಪಿನಂಗಡಿ ಸರಕಾರಿ ಶಾಲೆಯಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮಕ್ಕೆ ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ. ಮುರಳಿ ಮೋಹನ ಚೂಂತಾರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮರಗಿಡಗಳು ಸಕಲ ಜೀವ ಸಂಕುಲಗಳ ಅಸ್ತಿತ್ವಕ್ಕೆ ಕಾರಣವಾಗಿರುವುದರಿಂದ ಅವುಗಳ ರಕ್ಷಣೆ ಮತ್ತು ಪೋಷಣೆ ಎಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರು ಗಿಡಗಳನ್ನು ಬೆಳೆಸುವ ಹವ್ಯಾಸವಾಗಿ ಮಾಡಿಕೊಂಡರೆ ಶುದ್ಧಗಾಳಿಯೊಂದಿಗೆ ಆರೋಗ್ಯ ಚೆನ್ನಾಗಿರುತ್ತದೆ ಎಂದರು.
 
ಕಾರ್ಯಕ್ರಮದಲ್ಲಿ ಎಸ್‌ಡಿ ಎಂ ಸಿ ಸದಸ್ಯ ಪುರಂದರ, ಉಪ್ಪಿನಂಗಡಿ ಪೇಟೆ ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ, ಗೃಹರಕ್ಷಕ ದಳದ ಘಟಕಾಧಿಕಾರಿ ರಾಮಣ್ಣ ಆಚಾರ್, ಹಿರಿಯ ಗೃಹ ರಕ್ಷಕ ದಿನೇಶ್ ಸೇರಿದಂತೆ ಘಟಕದ ಬಹುತೇಕ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News