ಬಂಟ್ವಾಳ: ಹಲವು ಮಂದಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ
ಬಂಟ್ವಾಳ, ಜು. 18: ನರಿಕೊಂಬು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ, ಸದಸ್ಯ ಹಾಗೂ ಹಲವು ಮಂದಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಇವರನ್ನು ಪಕ್ಷಕ್ಕೆ ಬರಮಾಡಿಕೊಂಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ನಾಡಿನಲ್ಲಿ ಅಶಾಂತಿ ಹಾಗೂ ಕೋಮು ದ್ವೇಷವನ್ನು ಹರಡುವುದರ ಮೂಲಕ ರಾಜಕೀಯ ಲಾಭ ಗಳಿಸಲು ಸಾಧ್ಯವಿಲ್ಲ. ಬಿಜೆಪಿಯ ಇಂತಹ ತಂತ್ರಗಾರಿಕೆಯನ್ನು ಜನತೆ ಚೆನ್ನಾಗಿ ಅರಿತುಕೊಂಡಿದ್ದಾರೆ. ನಾಡಿನ ಅಭಿವೃದ್ದಿ, ಶಾಂತಿ-ಸೌಹಾರ್ದತೆಯನ್ನು ಬಯಸುವ ಜನತೆ ಕಾಂಗ್ರೆಸ್‌ಗೆ ಶ್ರೀರಕ್ಷೆಯಾಗಿದ್ದಾರೆ ಎಂದರು.
ನರಿಕೊಂಬು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರಾಜೀವಿ ಕೃಷ್ಣಪ್ಪ ಪೂಜಾರಿ, ಸದಸ್ಯ ಮಾಧವ ಪೂಜಾರಿ ಕರ್ಬೆಟ್ಟು, ಬೋಳಂತೂರು ಹೊಸಮನೆ ನಿವಾಸಿಗಳಾದ ಚೇತನ್ ಪೂಜಾರಿ, ಹೂವಪ್ಪ ಪೂಜಾರಿ, ನಿತೇಶ್ ಪೂಜಾರಿ, ಶ್ರೀನಾಥ್ ಪೂಜಾರಿ, ತಿಮ್ಮಪ್ಪ ಪೂಜಾರಿ, ಬೋಳಂತೂರು-ದರ್ಖಾಸು ನಿವಾಸಿಗಳಾದ ರಾಜೇಶ್ ಪೂಜಾರಿ, ದೇಜಪ್ಪ ಪೂಜಾರಿ, ಬೋಳಂತೂರು ನಿವಾಸಿಗಳಾದ ವಸಂತ ಸಪಲ್ಯ, ಪ್ರಮೀಳಾ ವಸಂತ, ಕಲ್ಯಾರು ನಿವಾಸಿಗಳಾದ ಭರತ್‌ರಾಜ್ ಸಪಲ್ಯ, ಹೇಮಾವತಿ ಯೋಗೀಶ್, ರಂಜಿತ್ ಭಂಡಾರಿ, ಅಜಯ್ ಪೂಜಾರಿ ಕರ್ಬೆಟ್ಟು, ವಿಲ್ಫ್ರೆಡ್ ಬರ್ಬೋಜಾ ಪೊತಾಜೆ ಮೊದಲಾದವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡಗೊಂಡರು.
ಈ ಸಂದರ್ಭ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಜಿ.ಪಂ. ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್. ಮುಹಮ್ಮದ್, ಮಮತಾ ಡಿ.ಎಸ್. ಗಟ್ಟಿ, ಮಂಜುಳಾ ಮಾವೆ, ರಾಜ್ಯ ಮಾಲಿನ್ಯ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಎಪಿಎಂಸಿ ಅಧ್ಯಕ್ಷ ಕೆ. ಪದ್ಮನಾಭ ರೈ, ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಆಲ್ಬರ್ಟ್ ಮೆನೆಜಸ್, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ, ನರಿಕೊಂಬು ವಲಯ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ಬೋಳಂತೂರು, ಕಳ್ಳಿಗೆ ಗ್ರಾ.ಪಂ. ಸದಸ್ಯ ಮಧುಸೂದನ್ ಶೆಣೈ, ಪಕ್ಷ ಪ್ರಮುಖರಾದ ಬಿ.ಕೆ. ಇದ್ದಿನಬ್ಬ ಕಲ್ಲಡ್ಕ, ಆಲ್ಫೋನ್ಸ್ ಮೆನೇಜಸ್, ಜನಾರ್ದನ ಚೆಂಡ್ತಿಮಾರು ಮೊದಲಾದವರು ಭಾಗವಹಿಸಿದ್ದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಚಿವ ಬಿ. ರಮಾನಾಥ ರೈ ಅವರ ಅಭಿವೃದ್ದಿ ಕಾರ್ಯಗಳು ಹಾಗೂ ನಾಡಿನಲ್ಲಿ ಶಾಂತಿ-ಸೌಹಾರ್ದತೆಯ ನಿರ್ಮಾಣಕ್ಕಾಗಿ ಹಗಲಿರುಳು ನಡೆಸುತ್ತಿರುವ ಸೇವೆಯನ್ನು ಪರಿಗಣಿಸಿ ಜನತೆ ಕಾಂಗ್ರೆಸ್‌ನತ್ತ ಆಕರ್ಷಿತರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನರು ಬಿಜೆಪಿ ಹಾಗೂ ಇತರ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.
-ಬಿ.ಎಂ. ಅಬ್ಬಾಸ್ ಅಲಿ ಅಧ್ಯಕ್ಷರು, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ