×
Ad

‘ಮೇಡ್ ಇನ್ ಅಮೆರಿಕ’ ಉತ್ಪನ್ನಗಳ ಮಾರಾಟಕ್ಕಾಗಿ ಟ್ರಂಪ್ ಪಣ

Update: 2017-07-18 20:11 IST

ವಾಶಿಂಗ್ಟನ್, ಜು. 18: ‘ಅನುಚಿತ’ ಮತ್ತು ‘ಮೂರ್ಖತನ’ದ ವ್ಯಾಪಾರ ಪದ್ಧತಿಯ ವಿರುದ್ಧ ಹೋರಾಡಲು ‘ಮೇಡ್ ಇನ್ ಅಮೆರಿಕ’ ಉತ್ಪನ್ನಗಳ ಮಾರಾಟಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಣತೊಟ್ಟಿದ್ದಾರೆ.

ಆದರೆ, ಅವರ ಕುಟುಂಬದ ಉದ್ಯಮಗಳು ತಮ್ಮ ಉತ್ಪನ್ನಗಳ ಉತ್ಪಾದನೆಯನ್ನು ಭಾರತ, ಚೀನಾ ಮತ್ತು ಬಾಂಗ್ಲಾದೇಶಗಳಂಥ ದೇಶಗಳಿಗೆ ಪರಭಾರೆ (ಔಟ್‌ಸೋರ್ಸಿಂಗ್) ಮಾಡುತ್ತಿವೆ ಎಂಬುದಾಗಿ ಅವರ ಟೀಕಾಕಾರರು ಆರೋಪಿಸಿದ್ದಾರೆ.

ಗಿಬ್ಸನ್ ಗಿಟಾರ್‌ಗಳು, ಸ್ಟೆಟ್ಸನ್ ಕೌಬಾಯ್ ಹ್ಯಾಟ್‌ಗಳು ಮತ್ತು ಇತರ ‘ಮೇಡ್ ಇನ್ ಅಮೆರಿಕ’ ಉತ್ಪನ್ನಗಳಿಂದ ಸುತ್ತುವರಿದ ಟ್ರಂಪ್, ಅಮೆರಿಕದ ಕಂಪೆನಿಗಳು ಮತ್ತು ಅವುಗಳ ಉದ್ಯೋಗಿಗಳ ಪರವಾಗಿ ನಿಲ್ಲುವುದಾಗಿ ಭರವಸೆ ನೀಡಿದರು.

ಅದೇ ವೇಳೆ, ‘ಅನುಚಿತ ವ್ಯಾಪಾರ ಪದ್ಧತಿ’ಗಳಲ್ಲಿ ತೊಡಗುವ ದೇಶಗಳ ವಿರುದ್ಧ ಪ್ರತೀಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಸಿದರು.

ಆದರೆ, ಈ ಉದ್ದೇಶದ ನೂತನ ನೀತಿಯನ್ನಾಗಲಿ ನಿರ್ದಿಷ್ಟ ಕ್ರಮವನ್ನಾಗಲಿ ಟ್ರಂಪ್ ಘೋಷಿಸಲಿಲ್ಲ.

ಟ್ರಂಪ್ ಉದ್ಯಮಗಳು ಮಾರುವುದು ವಿದೇಶಿ ವಸ್ತುಗಳನ್ನು!

 ಆದರೆ, ಟ್ರಂಪ್‌ರ ‘ಮೇಡ್ ಇನ್ ಅಮೆರಿಕ’ ಕುರಿತ ನಿಲುವನ್ನು ಅವರ ರಾಜಕೀಯ ವಿರೋಧಿಗಳು ಟೀಕಿಸಿದ್ದಾರೆ. ಅವರ ಕುಟುಂಬದ ಒಡೆತನದ ಉದ್ಯಮಗಳು ಈಗಲೂ ಭಾರತ, ಚೀನಾ ಮತ್ತು ಬಾಂಗ್ಲಾದೇಶ ಮುಂತಾದ ವಿದೇಶಗಳಲ್ಲಿ ತಯಾರಾದ ಉತ್ಪನ್ನಗಳನ್ನು ಮಾರುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

‘‘ಅಂಗಿಗಳು ತಯಾರಾದದ್ದು ಎಲ್ಲಿ? ಬಾಂಗ್ಲಾದೇಶದಲ್ಲಿ. ಟೈಗಳ ತಯಾರಾದದ್ದು ಎಲ್ಲಿ? ಚೀನಾದಲ್ಲಿ’’ ಎಂದು ಸೆನೆಟ್ ಮೈನಾರಿಟಿ ನಾಯಕ ಚಕ್ ಶುಮರ್ ಅವರ ಸಂವಹನ ನಿರ್ದೇಶಕ ಮ್ಯಾಥ್ಯೂ ವಾಗ್ನರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News