×
Ad

ಅತ್ಯಾಚಾರ: ತಿಲಕರ ಮರಿಮೊಮ್ಮಗನ ವಿರುದ್ಧ ಪ್ರಕರಣ

Update: 2017-07-18 21:38 IST

ಪುಣೆ, ಜು.18: ಮಹಿಳೆಯ ಅತ್ಯಾಚಾರ ನಡೆಸಿದ ಆರೋಪದಲ್ಲಿ ಸ್ವಾತಂತ್ರ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರ ಮರಿಮೊಮ್ಮಗ , ಕಾಂಗ್ರೆಸ್ ಮುಖಂಡ ರೋಹಿತ್ ತಿಲಕ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

  40ರ ಹರೆಯದ ಮಹಿಳೆ ಮತ್ತು ರೋಹಿತ್ ತಿಲಕ್ ಕಳೆದ ಹಲ ವರ್ಷಗಳಿಂದ ಪರಿಚಿತರಾಗಿದ್ದರು. ತನ್ನನ್ನು ಮದುವೆಯಾಗುವ ಭರವಸೆ ನೀಡಿ ಕಳೆದ ಕೆಲವು ವರ್ಷಗಳಿಂದ ರೋಹಿತ್ ನಿರಂತರವಾಗಿ ಅತ್ಯಾಚಾರ ಎಸಗಿರುವುದಾಗಿ ಆಕೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ವಿವಿಧ ಸೆಕ್ಷನ್‌ನಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರೋಹಿತ್ ತಿಲಕ್ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಸಂಸದ ಜಯಂತ್‌ರಾವ್ ತಿಲಕ ಅವರ ಮೊಮ್ಮಗ. 2014ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News