ಹೆಲ್ತ್ ಪ್ಲಸ್ ಪ್ರೊ ಮೆಡಿಕಲ್ ಡೈರೆಕ್ಟರಿ ಬಿಡುಗಡೆ
ಮಂಗಳೂರು, ಜು.19: ಪ್ರೋ ಮೀಡಿಯಾ ಸೊಲ್ಯೂಶನ್ಸ್ ವತಿಯಿಂದ ಹೆಲ್ತ್ ಪ್ಲಸ್ ಪ್ರೊ ಮೆಡಿಕಲ್ ಡೈರೆಕ್ಟರಿಯ 3ನೇ ಆವೃತ್ತಿ ಬಿಡುಗಡೆ ಸಮಾರಂಭ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆಯಿತು.
ಕನ್ನಡಿಗರ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಬಿಡುಗಡೆಗೊಳಿಸಿದರು. ಪ್ಲಾಸ್ಟಿಕ್ ಆ್ಯಂಡ್ ಕಾಸ್ಮೆಟಿಕ್ ಸರ್ಜನ್ ಡಾ. ಸತೀಶ್ಚಂದ್ರ ಬಿ. ಕೆ., ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಸಂಸ್ಥೆಯ ಪ್ರಕಾಶಕರಾದ ರವೀಂದ್ರ ರಾವ್ ಎಸ್.ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕ ರವೀಂದ್ರ ಎಸ್. ಮತ್ತು ತಂಡ ಡೈರೆಕ್ಟರಿಯನ್ನು ಪರಿಚಯಿಸುತ್ತಿದ್ದು, ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿರುವ ಆಸ್ಪತ್ರೆಗಳು, ವೈದ್ಯರ ಜಾಹೀರಾತು, ವಿಳಾಸ, ದೂರವಾಣಿ ಸಂಖ್ಯೆಗಳನ್ನು ಇದರಲ್ಲಿ ನಮೂದಿಸಲಾಗುತ್ತಿದೆ.
ಕಾಸರಗೋಡು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿರುವ ವೈದ್ಯರು, ಆಸ್ಪತ್ರೆಗಳ ವಿವರಗಳನ್ನು ಇದು ಒಳಗೊಂಡಿದೆ. ಸಂಸ್ಥೆಯು ಮರೋಳಿಯ ಮನೀಶ್ ಅಪಾರ್ಟ್‌ಮೆಂಟ್‌ನಲ್ಲಿ ಕಚೇರಿಯನ್ನು ಹೊಂದಿದೆ.