×
Ad

ನಿಮ್ಮ ಆಧಾರ್ ನಿಮ್ಮ ಮೊಬೈಲ್‌ನಲ್ಲಿ.... ಇದಕ್ಕಾಗಿ ಬಂದಿದೆ ಎಂಆಧಾರ್ ಆ್ಯಪ್

Update: 2017-07-19 19:35 IST

ಹೊಸದಿಲ್ಲಿ,ಜು.19: ಆಧಾರ್ ಸಂಖ್ಯೆಗಳನ್ನು ವಿತರಿಸುವ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ(ಯುಐಡಿಎಐ)ವು ‘ಎಂಆಧಾರ್ ಆ್ಯಪ್’ನ್ನು ಬಿಡುಗಡೆಗೊಳಿಸಿದ್ದು, ಇದರ ಮೂಲಕ ಸಾರ್ವಜನಿಕರು ತಮ್ಮ ಆಧಾರ್ ಕಾರ್ಡ್ ವಿವರಗಳನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಇಟ್ಟುಕೊಳ್ಳಬಹುದಾಗಿದೆ.

ಸದ್ಯಕ್ಕೆ ಈ ಆ್ಯಪ್‌ನ್ನು ಆಂಡ್ರಾಯ್ಡಾ ಪೋನ್‌ಗಳಲ್ಲಿ ಮಾತ್ರ ಬಳಸಬಹುದಾಗಿದೆ. ಈ ಆ್ಯಪ್ ಮೂಲಕ ಬಳಕೆದಾರರು ತಕ್ಷಣಕ್ಕೆ ಲಭ್ಯವಾಗುವಂತೆ ಆಧಾರ್ ಗುರುತನ್ನು ಫೋನ್‌ನಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ಜೊತೆಗೆ ತಮ್ಮ ವೈಯಕ್ತಿಕ ಮಾಹಿತಿಗಳ ಸುರಕ್ಷತೆಗಾಗಿ ತಮ್ಮ ಬಯೊಮೆಟ್ರಿಕ್ ದತ್ತಾಂಶಗಳನ್ನು ಲಾಕ್/ಅನ್‌ಲಾಕ್ ಮಾಡಬಹುದಾಗಿದೆ.

ಎರಡು ಆಯಾಮಗಳ ಬಾರ್‌ಕೋಡ್ ಆಗಿರುವ ಕ್ಯೂಆರ್(ಕ್ವಿಕ್ ರೆಸ್ಪಾನ್ಸ್) ಕೋಡ್‌ನ ಮೂಲಕ ಆಧಾರ್ ವಿವರಗಳ ಅಪಡೇಟ್‌ನ್ನು ನೋಡಲು ಮತ್ತು ಶೇರ್ ಮಾಡಿಕೊಳ್ಳಲು ಹಾಗೂ ದೂರಸಂಪರ್ಕ ಕಂಪನಿಗಳಿಂತಹ ಸೇವಾ ಪೂರೈಕೆದಾರ ರೊಂದಿಗೆ ಇಕೆವೈಸಿ ವಿವರಗಳನ್ನು ಹಂಚಿಕೊಳ್ಳಲೂ ಈ ಆ್ಯಪ್‌ನಿಂದ ಸಾಧ್ಯವಾಗಲಿದೆ.

ಎಂಆಧಾರ್ ಅನ್ನು ಗೂಗಲ್ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳ ಬಹುದಾಗಿದೆ. ಆದರೆ ಆ್ಯಪ್ ಬಳಕೆಗೆ ಆಧಾರ್‌ಗೆ ಜೋಡಣೆಗೊಂಡಿರುವ ಮೊಬೈಲ್ ಸಂಖ್ಯೆ ಅಗತ್ಯವಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News