×
Ad

ರಾಜ್ಯದಲ್ಲಿ ಸಾರ್ವತ್ರಿಕ ಆರೋಗ್ಯ ಸುರಕ್ಷಾ ಕಾರ್ಯಕ್ರಮಕ್ಕೆ ಯೋಜನೆ: ಯು.ಟಿ.ಖಾದರ್‌

Update: 2017-07-19 21:09 IST

ಮಂಗಳೂರು, ಜು.19: ರಾಜ್ಯದಲ್ಲಿ ಸಾರ್ವತ್ರಿಕ ಆರೋಗ್ಯ ಸುರಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲು ಸರಕಾರ ಯೋಜನೆ ರೂಪಿಸಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಹಾಗೂ ಮಾಜಿ ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ದೇರಳಕಟ್ಟೆ ಯೆನೆಪೋಯ ವಿಶ್ವ ವಿದ್ಯಾನಿಲಯ, ದಂತ ವೈದ್ಯಕೀಯ ಕಾಲೇಜು ವಿಭಾಗದ ವತಿಯಿಂದ ‘ಬಾಯಿ ಆರೋಗ್ಯ ನೀತಿಗೆ ಉನ್ನತೀಕರಣ’ ಸಂಬಂಧಿಸಿದಂತೆ ಹಮ್ಮಿಕೊಂಡ ಒಂದು ದಿನದ ವಿಚಾರ ಸಂಕಿರಣದ ಸಮಾರೋಪ ಸಮಾರಂಭ ವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಎಲ್ಲರಿಗೂ ಆರೋಗ್ಯ ಸುರಕ್ಷೆ ನೀಡುವ ನಿಟ್ಟಿನಲ್ಲಿ ರಾಜ್ಯದ ರಾಯಚೂರು ಮತ್ತು ಮೈಸೂರು ಜಿಲ್ಲೆಗಳನ್ನು ಪೈಲಟ್ ಯೋಜನೆಗಾಗಿ ಆಯ್ದುಕೊಳ್ಳಲಾಗಿತ್ತು. ಈ ಬಗ್ಗೆ ಸರ್ವೆ ಕಾರ್ಯ ನಡೆದಿತ್ತು. ಮುಂದಿನ ಹಂತದಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಕೃತಕ ದಂತದ ಸೆಟ್ ನೀಡುವ ಯೋಜನೆಯ ಮೂಲಕ 10 ಸಾವಿರ ಜನರಿಗೆ ಇದರ ಪ್ರಯೋಜನೆ ಪಡೆದಿದ್ದಾರೆ. ರಾಜ್ಯದಲ್ಲಿ ಹಮ್ಮಿಕೊಂಡ ಯೋಜನೆಗೆ ಬಗ್ಗೆ ಕೇಂದ್ರ ಸರಕಾರವೂ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಯೋಜನೆಯನ್ನು ಇತರ ಕಡೆಗೆ ವಿಸ್ತರಿಸುವ ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಯೆನೆಪೋಯ ವೈದ್ಯರ ತಂಡ ಈ ಯೋಜನೆ ರೂಪಿಸಲು ಪ್ರೇರಣೆ ಸಹಕಾರ ನೀಡಿದೆ .ರಾಜ್ಯದಲ್ಲಿ ಬಾಯಿಯ ಆರೋಗ್ಯದ ದೃಷ್ಟಿಯಿಂದ ಗುಟ್ಕಾ ನಿಷೇಧದ ತೀರ್ಮಾನವನ್ನು ಸರಕಾರ ಕೈ ಗೊಂಡಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ದಂತ ವೈದ್ಯಕೀಯ ಕ್ಲೀನಿಕ್ ತೆರೆಯಲು ಕಡಿಮೆ ಬಡ್ಡಿದರದ (ಶೇ1ರಿಂದ2ಬಡ್ಡಿದರದ ) ಸಾಲ ಸೌಲಭ್ಯವನ್ನು ನೀಡುವ ಯೋಜನೆಯ ಅಗತ್ಯವಿದೆ. ವಿಚಾರ ಸಂಕಿರಣದ ನಿರ್ಣಯಗಳನ್ನು ಅನುಷ್ಠಾನಗೊಳಿಸಲು ಮುಖ್ಯ ಮಂತ್ರಿಯ ಗಮನಕ್ಕೆ ತರುವುದಾಗಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಉಚಿತ ದಂತ ಭಾಗ್ಯ ರಾಜ್ಯದ ಜನತೆಗೆ ಸಹಕಾರಿಯಾದ ಮಹತ್ವದ ಯೋಜನೆ:- ರಾಜ್ಯದಲ್ಲಿ ಸರಕಾರ ಹಮ್ಮಿಕೊಂಡ ಉಚಿತ ದಂತ ಭಾಗ್ಯ ಯೋಜನೆ ರಾಜ್ಯದ ಜನತೆಗೆ ಸಹಕಾರಿಯಾದ ಮಾದರಿ ಯೋಜನೆಯಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಈ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡಲು ಯೆನೆಪೋಯ ವಿಶ್ವ ವಿದ್ಯಾನಿಲಯದ ದಂತ ವೈದ್ಯಕೀಯ ವಿಭಾಗದ ಸಲಹೆ ಸಹಕಾರ ರಾಜ್ಯದ ಜನತೆಗೆ ಸಹಾಯವಾಗಿರುವುದು ತೃಪ್ತಿ ತಂದಿದೆ ಎಂದು ಯೆನೆಪೋಯ ವಿಶ್ವ ವಿದ್ಯಾನಿಲಯದ ಕುಲಪತಿ ಯೆನೆಪೋಯ ಅಬ್ದುಲ್ಲಾ ಕುಂಞ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸರಕಾರ ಈ ಯೋಜನೆಯನ್ನು ಜನರಿಗೆ ತಲುಪಿಸಿ ಮಾದರಿ ಕಾರ್ಯಕ್ರಮ ಹಮ್ಮಿಕೊಂಡಂತಾಗಿದೆ ಎಂದವರು ತಿಳಿಸಿದ್ದಾರೆ.

ವಿಚಾರ ಸಂಕಿರಣದಲ್ಲಿ ಕೈ ಗೊಂಡ ನಿರ್ಣಯಗಳು:  ಅಂಗನವಾಡಿ ಕೇಂದ್ರ ಮತ್ತು ಶಾಲೆಗಳಲ್ಲಿ ಆಹಾರ ಸೇವನೆಯ ಮೊದಲು ಕಡ್ಡಾಯವಾಗಿ ಕಾರ್ಬೋಲಿಕ್ ಸಾಬೂನಿನಿಂದ ಕೈ ತೊಳೆಯಬೇಕು.

ಗರ್ಭೀಣಿಯರಿಗೆ 4-5 ತಿಂಗಳು ತುಂಬುವಾಗ ದಂತ ವೈದ್ಯಕೀಯ ಕೇಂದ್ರಗಳಲ್ಲಿ ಚಿಕಿತ್ಸೆ. ರಾಜ್ಯದಲ್ಲಿ ಬಾಯಿ ಕ್ಯಾನ್ಸರ್ ಮುಂಚಿತವಾಗಿ ಪತ್ತೆ ಹಚ್ಚಲು ಕ್ರಮ. ರಾಜ್ಯ ಸರಕಾರಿ ದಂತ ವೈದ್ಯಕೀಯ ಕೇಂದ್ರಗಳಲ್ಲಿ ಬಾಯೊ ಆರೋಗ್ಯ ರಕ್ಷಣೆಗೆ ಪ್ರತ್ಯೇಕ ಬಜೆಟ್ ಮಂಜೂರು ಮಾಡಬೇಕು. ರಾಜ್ಯದಲ್ಲಿ ಬಾಯಿ ಆರೋಗ್ಯ ಸಮೀಕ್ಷೆ ನಡೆಸ ಬೇಕು ಎಂಬ ನಿರ್ಣಯಗಳನ್ನು ರಾಜ್ಯ ಬಾಯಿ ಆರೋಗ್ಯ ಪಾಲಿಸಿ ನೀತಿಯ ಅಧ್ಯಕ್ಷ ಡಾ.ಗಣೇಶ್ ಶೆಣೈ ಪಂಚಮಾಲ್ ಸಭೆಯಲ್ಲಿ ಮಂಡಿಸಿದರು.

ಸಮಾರಂಭದಲ್ಲಿ ಯೆನೆಪೋಯ ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಡಾ.ಎಂ.ವಿಜಯ ಕುಮಾರ್, ಕುಲಸಚಿವ ಡಾ.ಜಿ.ಶ್ರೀ ಕುಮಾರ್ ಮೆನನ್, ರಾಜ್ಯ ಓರಲ್ ಹೆಲ್ತ್ ಪಾಲಿಸಿ ಆರೋಗ್ಯ ವಿಭಾಗದ ಉಪ ನಿರ್ದೇಶಕಿ ಡಾ.ಎ.ಕೆ.ಪ್ರಮೀಳಾ, ರಾಜ್ಯ ಬಾಯಿ ಆರೋಗ್ಯ ಸಲಹೆಗಾರ ಡಾ.ವಿ.ನವೀನ್ ಶೇಖರ್, ಯೆನೆಪೋಯ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಚ್. ಶ್ರೀಪತಿ ರಾವ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News