×
Ad

ಅರಣ್ಯದ ಸಂರಕ್ಷಣೆ ಎಲ್ಲರ ಜವಾಬ್ದಾರಿ: ರವಿ ಕುಮಾರ್

Update: 2017-07-19 21:31 IST

ಮಂಗಳೂರು, ಜು.19: ಅರಣ್ಯ ಹಾಗೂ ಇತರ ಭೂಸಂಪನ್ಮೂಲವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಮಂಗಳೂರು ಉಪವಲಯ ಅರಣ್ಯಾಧಿಕಾರಿ ರವಿ ಕುಮಾರ್ ಹೇಳಿದ್ದಾರೆ.

ನಗರದ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಸಮುದಾಯ ವೈದ್ಯಶಾಸ್ತ್ರ ವಿಭಾಗ ಹಮ್ಮಿಕೊಂಡಿದ್ದ ‘ಹಸಿರು ಕ್ಯಾಂಪಸ್ ಅಭಿಯಾನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ‘ಫಾರೆಸ್ಟ್’ (ಅರಣ್ಯ) ಎಂಬ ಆಂಗ್ಲಪದವನ್ನು ವಿಶ್ಲೇಷಿಸಿದ ಅವರು, ಎಫ್ ಎಂಬ ಮೊದಲ ಅಕ್ಷರ- ಫುಡ್(ಆಹಾರ), ಒ ಎಂದರೆ ಆಕ್ಸಿಜನ್(ಆಮ್ಲಜನಕ), ಆರ್ ಎಂದರೆ ರೈನ್‌ಫಾಲ್(ಮಳೆ ಸುರಿಯುವುದು), ಇ ಎಂದರೆ ಇಕಲಾಜಿಕಲ್ ಬ್ಯಾಲೆನ್ಸ್(ಪರಿಸರ ಸಮತೋಲನ), ಎಸ್ ಎಂದರೆ (ಸಾಲ್ ಇರೋಶನ್) ಮಣ್ಣಿನ ಸವಕಳಿ ಮತ್ತು ಟಿ ಎಂದರೆ ಟಿಂಬರ್(ಕಟ್ಟಿಗೆ) ಎಂಬರ್ಥ ಸೂಚಿಸುತ್ತದೆ . ಅರಣ್ಯದ ಮಹತ್ವವನ್ನು ಈ ಪದಗಳೇ ಸೂಚಿಸುತ್ತವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಆಡಳಿತಾಧಿಕಾರಿ ರೆ.ಫಾದರ್ ಸಿಲ್ವೆಸ್ಟರ್ ವಿ.ಲೋಬೊ ಮಾತನಾಡಿ, ಹಸಿರು ಕ್ಯಾಂಪಸ್ ಅಭಿಯಾನದ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿ ಭೂಮಿ ತಾಯಿಯ ಬಗ್ಗೆ ಕಾಳಜಿ ವಹಿಸಿ, ಸಂರಕ್ಷಿಸುವ ಕಾರ್ಯ ನಡೆಯಬೇಕು ಎಂದರು.

 ಗಿಡಕ್ಕೆ ನೀರೆರೆಯುವ ಮೂಲಕ ರವಿಕುಮಾರ್ ಹಾಗೂ ‘ಹಸಿರು ರಾಯಭಾರಿ’ ಮಾಧವ ಉಲ್ಲಾಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಉಪಪ್ರಾಂಶುಪಾಲ ಡಾಪ್ರಭುಕಿರಣ್ ಸ್ವಾಗತಿಸಿದರು. ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ ಸುಧಾಮತಿ ವಂದಿಸಿದರು. ಬಳಿಕ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News