ಟೆಂಪೊ ಪಲ್ಟಿ: ಆರು ಮಂದಿಗೆ ಗಾಯ
Update: 2017-07-19 21:35 IST
ಕಲ್ಯಾಣಪುರ, ಜು.19: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಗುಲ್ಬರ್ಗದ ಗಾಣಪುರಕ್ಕೆ ಪ್ರವಾಸ ಹೊರಟಿದ್ದ ಕುಡಿಪಾಡಿ ಗ್ರಾಮದ 12 ಮಂದಿಯಿದ್ದ ಟೆಂಪೊ ಟ್ರಾವಲ್ಸ್ ಇಂದು ಬೆಳಗ್ಗೆ ಕಲ್ಯಾಣಪುರ ಸೇತುವೆಯ ಬಳಿ ಪಲ್ಟಿ ಹೊಡೆದು ಅದರಲ್ಲಿದ್ದ ಆರು ಮಂದಿ ಗಾಯಗೊಂಡ ಘಟನೆ ನಡೆದಿದೆ.
ಗಾಯಗೊಂಡವರನ್ನು ನಾರಾಯಣ ನಾಯ್ಕ, ರೇಖಾ, ವನಿತಾ, ಶಶಿಕಲಾ, ಶಾರದಾ ಹಾಗೂ ಶಿವರಾಮ ಎಂದು ಗುರುತಿಸಲಾಗಿದೆ.
ಬೆಳಗಿನ ಜಾವ 5:30ರ ಸುಮಾರಿಗೆ ಇವರೆಲ್ಲರೂ ಟೆಂಪೊ ಟ್ರಾವಲ್ಸ್‌ನಲ್ಲಿ ಹೊರಟಿದ್ದು, 8 ಗಂಟೆಯ ಸುಮಾರಿಗೆ ಸಂತೆಕಟ್ಟೆ ದಾಟಿ ಸೇತುವೆ ಬಳಿ ಸುರಿಯುತಿದ್ದ ಭಾರೀ ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಇದರಿಂದ ಆರು ಮಂದಿಗೆ ಗಾಯಗಳಾಗಿವೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.