ಅಕ್ರಮ ಮದ್ಯ ಸಹಿತ ಆರೋಪಿ ಸೆರೆ
Update: 2017-07-19 22:23 IST
ಮಂಜೇಶ್ವರ, ಜು. 19: ಮಿನಿಬಾರ್ ಕಾರ್ಯಾಚರಿಸುತ್ತಿದೆಯೆಂಬ ಗುಪ್ತ ಮಾಹಿತಿ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 46 ಬಾಟ್ಲಿ ವಿದೇಶ ಮದ್ಯ ವಶಪಡಿಸಿ, ಆರೋಪಿಯನ್ನು ಬಂಧಿಸಲಾಗಿದೆ.
ಕುಂಬಳೆಯ ಅನಿಲ್ ಕುಂಬ್ಳೆ ರಸ್ತೆ ಸಮೀಪದ ಗಿರೀಶ್ ಭಟ್ (38) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಮಾರಾಟಕ್ಕಾಗಿ ದಾಸ್ತಾನಿರಿಸಿದ್ದ 46 ಬಾಟ್ಲಿ ವಿದೇಶ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆ ಬಳಿಯ ಅಂಗಡಿ ಕೇಂದ್ರೀಕರಿಸಿ ಗಿರೀಶ್ ಭಟ್ ಮದ್ಯ ಮಾರಾಟ ನಡೆಸುತ್ತಿದ್ದಾನೆಂಬ ಗುಪ್ತ ಮಾಹಿತಿ ಮೇರೆಗೆ ಕುಂಬಳೆ ಅಬಕಾರಿ ಇನ್‌ಸ್ಪೆಕ್ಟರ್ ಶಿಜು ನೇತೃತ್ವದಲ್ಲಿ ಮಂಗಳವಾರ ರಾತ್ರಿ ದಾಳಿ ನಡೆಸಿದರು.
ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ರಾಜನ್, ಬಿಜು, ಸುಚೀಂದ್ರನ್, ಸುಜಿತ್ ಕುಮಾರ್, ಶಾಜಿ ಎಂಬಿವರು ಕಾರ್ಯಾಚರಣೆಯ ತಂಡದಲ್ಲಿದ್ದರು.