×
Ad

ಮೂಡುಶೆಡ್ಡೆ: ಹಟ್ಟಿಯಿಂದ ದನ ಕಳವು

Update: 2017-07-19 22:25 IST

ಮಂಗಳೂರು, ಜು.19: ನಗರ ಹೊರವಲಯದ ಮೂಡುಶೆಡ್ಡೆ ಶಾಲೆ ಪದವು ನಿವಾಸಿ ರತ್ನಾ ಎಂಬವರಿಗೆ ಸೇರಿದ ಹಟ್ಟಿಯಿಂದ ದನ ಮಂಗಳವಾರ ರಾತ್ರಿ ಕಳವು ಮಾಡಲಾಗಿದೆ.

ಹಟ್ಟಿಯಲ್ಲಿ ಐದು ದನಗಳನ್ನು ಕಟ್ಟಿ ಹಾಕಲಾಗಿತ್ತು. ಮಂಗಳವಾರ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ರತ್ನಾ ಹಟ್ಟಿಗೆ ತೆರಳಿ ದನಗಳಿಗೆ ಹುಲ್ಲು ಹಾಕಿ ತೆರಳಿದ್ದರು ಎನ್ನಲಾಗಿದೆ. ಬುಧವಾರ ಬೆಳಗ್ಗೆ 6 ಗಂಟೆಗೆ ಹಟ್ಟಿಗೆ ಬಂದು ನೋಡಿದಾಗ ದನ ಕಾಣೆಯಾಗಿರುವುದು ತಿಳಿದು ಬಂದಿದೆ.

ಹಟ್ಟಿಗೆ ಅಳವಡಿಸಿದ ಕಬ್ಬಿಣದ ಗೇಟು ತೆರೆದಿದ್ದು, ಕಳ್ಳರು ದನವನ್ನು ಕಳವು ಮಾಡಿಕೊಂಡು ಹೋಗಿರಬೇಕೆಂದು ರತ್ನಾ ದೂರಿನಲ್ಲಿ ತಿಳಿಸಿದ್ದಾರೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News