‘ನೀರಿಗಾಗಿ ಅರಣ್ಯ’ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ
Update: 2017-07-19 22:39 IST
ಉಡುಪಿ, ಜು.19: ಅರಣ್ಯ ಇಲಾಖೆ ಪ್ರಸಕ್ತ ಸಾಲಿನಲ್ಲಿ ನೀರಿಗಾಗಿ ಅರಣ್ಯ ವಿಷಯಾಧಾರಿತ ವನಮಹೋತ್ಸವವನ್ನು ಜು.24ರಂದು ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಿದ್ದು, ಅದೇ ದಿನ ಬೆಳಗ್ಗೆ 10 ಗಂಟೆಗೆ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.
ರೋಟರಿ ಜಿಲ್ಲೆ 3182 ಮತ್ತು ಸುವಾಸ ಕ್ರಿಯೇಟಿವ್ ಆರ್ಟ್ ಸೆಂಟರ್ ಗುಡ್ಡೆಯಂಗಡಿ ಇವರ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಲಿದ್ದು, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ ‘ನೀರಿಗಾಗಿ ಅರಣ್ಯ’ ವಿಷಯದ ಮೇಲೆ ನಡೆಯಲಿದೆ.
ಈ ಕುರಿತ ಹೆಚ್ಚಿನ ಮಾಹಿತಿಗಾಗಿ ರೋಟರಿ ಕ್ಲಬ್‌ನ ಬಾಲಕೃಷ್ಣ ಮದ್ದೋಡಿ (ದೂರವಾಣಿ: 8904806090 ಅಥವಾ 9448229591) ಇವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ. ಮೊದಲು ಬಂದ ನೂರು ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ.