11-ಇ ಅರ್ಜಿಗಳ ಪರಿಶೀಲನೆ
ಉಡುಪಿ, ಜು.19: ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ ಸಾರ್ವಜನಿಕರು 11ಇ ಮೋಜಣಿಗಾಗಿ ಸಲ್ಲಿಸಿದ ಸಾಕಷ್ಟು ಅರ್ಜಿಗಳು ಕೆಲವೊಂದು ಕಾರಣದಿಂದ ವಿಲೇವಾರಿಯಾಗದೆ ಬಾಕಿ ಉಳಿದಿದ್ದು ಬಾಕಿ ಇರುವ ಅರ್ಜಿಗಳು ಯಾವ ಕಾರಣಕ್ಕಾಗಿ ಬಾಕಿಯಾಗಿದೆ ಮತ್ತು ಎಷ್ಟು ಸಮಯದಿಂದ ಎಂಬುವುದನ್ನು ಪರಿಶೀಲಿಸಿ ಅವುಗಳನ್ನು ಇತ್ಯರ್ಥಪಡಿಸಲು ಪರಿಹಾರೋಪಾಯಗಳನ್ನು ರೂಪಿಸುವ ಸಂಬಂಧ ಉಡುಪಿ ಜಿಲ್ಲಾಧಿಕಾರಿಗಳು ಜು.25ರಂದು ಅಪರಾಹ್ನ 3 ಕ್ಕೆ ಬ್ರಹ್ಮಾವರ, ಜು.29ರಂದು ಬೆಳಗ್ಗೆ 11 ಕ್ಕೆ ಉಡುಪಿ, ಆ.1ರಂದು ಬೆಳಗ್ಗೆ 11 ಕ್ಕೆ ಕುಂದಾಪುರ, ಅಪರಾಹ್ನ 3 ಕ್ಕೆ ಬೈಂದೂರು ಹಾಗೂ ಆ.4ರಂದು ಬೆಳಗ್ಗೆ 11 ಗಂಟೆಗೆ ಕಾರ್ಕಳ ತಾಲೂಕು ಕಚೇರಿಯಲ್ಲಿ ಹಾಜರಿದ್ದು, ಬಾಕಿ ಅರ್ಜಿಗಳ ಪರಿಶೀಲನೆ ನಡೆಸಲಿದ್ದಾರೆ.
ಅರ್ಜಿ ಸಲ್ಲಿಸಿ ತುಂಬಾ ಸಮಯದಿಂದ ಬಾಕಿ ಇದ್ದು, ಪರಿಹಾರ ದೊರಕದ ಸಾರ್ವಜನಿಕರು ಆ ದಿನ ಹಾಜರಿದ್ದು ಜಿಲ್ಲಾಧಿಕಾರಿ ಗಳಿಗೆ ತಮ್ಮ ಅಹವಾಲನ್ನು ಸಲ್ಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.