ಅಧ್ಯಕ್ಷರಾಗಿ ಹಾಜಿ ಎಸ್. ಇಬ್ರಾಹಿಂ ಕಮ್ಮಾಡಿ 17ನೇ ಬಾರಿಗೆ ಪುನರಾಯ್ಕೆ
ಪುತ್ತೂರು, ಜು.19: ತಾಲೂಕಿನ ಪ್ರತಿಷ್ಠಿತ ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್‌ನ ನೂತನ ಅಧ್ಯಕ್ಷರಾಗಿ ಉದ್ಯಮಿ ಹಾಜಿ ಎಸ್. ಇಬ್ರಾಹಿಂ ಕಮ್ಮಾಡಿ ಅವರು ಸತತ 17ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಸ್ಥೆಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್, ಉಪಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಹಾಜಿ ಅರ್ತಿಕೆರೆ, ಕೆ.ಪಿ. ಮಹಮ್ಮದ್ ಹಾಜಿ ಕಲ್ಲೇಗ, ಪ್ರಧಾನ ಕಾರ್ಯದರ್ಶಿಯಾಗಿ ಎಲ್.ಟಿ. ರಝಾಕ್ ಹಾಜಿ, ಖಜಾಂಜಿಯಾಗಿ ಅಬ್ದುಲ್ ರಹಿಮಾನ್ ಹಾಜಿ ಬೈತಡ್ಕ, ಕಾರ್ಯದರ್ಶಿಯಾಗಿ ಬಿ.ಎ.ಶಕೂರ್ ಹಾಜಿ, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಎಂ. ಬಾವಾ ಕೂರ್ನಡ್ಕ, ಪತ್ರಿಕಾ ಕಾರ್ಯದರ್ಶಿಯಾಗಿ ಶೇಖ್ ಜೈನುದ್ದೀನ್, ಕಾನೂನು ಸಲಹೆಗಾರರಾಗಿ ಕೆ.ಎಂ. ಸಿದ್ದೀಕ್, ಸದಸ್ಯರಾಗಿ ಕೆ.ಆರ್. ಹುಸೈನ್ ದಾರಿಮಿ ರೆಂಜಲಾಡಿ, ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಖಾಸಿಂ ಹಾಜಿ ಮಿತ್ತೂರು, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಪುತ್ತುಬಾವು ಸವಣೂರು, ಸುಲೈಮಾನ್ ಹಾಜಿ ಸಾಲ್ಮರ, ಅಬ್ದುಲ್ ರಹಿಮಾನ್ ಆಝಾದ್, ಅಶ್ರಫ್ ಕಲ್ಲೇಗ, ಸಲಹಾ ಸಮಿತಿ ಸದಸ್ಯರಾಗಿ ಎಸ್.ಬಿ. ಮುಹಮ್ಮದ್ ದಾರಿಮಿ, ಹಮೀದ್ ದಾರಿಮಿ ಸಂಪ್ಯ, ಉಮ್ಮರ್ ದಾರಿಮಿ ಸಾಲ್ಮರ, ಸತ್ತಾರ್ ಸಖಾಫಿ, ಪಿ.ಬಿ. ಹಸನ್ ಹಾಜಿ ಯುನಿಟಿ, ಸೂಫಿ ಹಾಜಿ ಸಂಟ್ಯಾರ್ ಮತ್ತು ಹಾಜಿ ಮುಸ್ತಫಾ ಕೆಂಪಿ ಅವರನ್ನು ಆಯ್ಕೆಯಾದರು.