×
Ad

ಬೆಂಗಳೂರಿನಲ್ಲಿ ಮಗು ಪತ್ತೆ

Update: 2017-07-19 22:49 IST

ಉಡುಪಿ, ಜು.19: ಪಡುಬಿದ್ರಿಯ ದಂಪತಿಗೆ ಬೆಂಗಳೂರಿನಲ್ಲಿ ಜೂ.28 ರಂದು ಒಂದು ತಿಂಗಳ ಹೆಣ್ಣು ಮಗು ದೊರೆತಿದ್ದು, ಮಗುವನ್ನು ಉಡುಪಿಯ ಶ್ರೀಕೃಷ್ಣ ಚಾರಿಟೇಬಲ್ ಟ್ರಸ್ಟ್ ಕೃಷ್ಣಾನುಗ್ರಹದಲ್ಲಿ ಇರಿಸಲಾಗಿದೆ.

ಈ ಮಗುವಿನ ಬಗ್ಗೆ ಮಾಹಿತಿ ಇದ್ದವರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಡಿಸಿ ಆಫೀಸ್ ಕಾಂಪ್ಲೆಕ್ಸ್, 203 ಬಿ ಬ್ಲಾಕ್ ರಜತಾದ್ರಿ, ಮಣಿಪಾಲ (ದೂರವಾಣಿ: 0820-2574964) ಅಥವಾ ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ, ನಿಟ್ಟೂರು ಉಡುಪಿ (ದೂ.ಸಂ.2580220 ಮೊಬೈಲ್: 9845909904) ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News