ಬೈಕ್ ಕಳವು
Update: 2017-07-19 23:01 IST
ಮಂಗಳೂರು, ಜು.19: ಮರೋಳಿ ಗ್ರಾಮದ ಕಿರಣ್ ಎಂಬವರಿಗೆ ಸೇರಿದ ಬೈಕನ್ನು ಕಳವುಗೈದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಯ್ಯಡಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಕಿರಣ್ ಕರ್ತವ್ಯ ಮುಗಿಸಿ ಜು.13ರಂದು ಮನೆಯ ಬಳಿ ತನ್ನ ಬೈಕ್ ನಿಲ್ಲಿಸಿದ್ದು, ಮರುದಿನ ಬೆಳಗ್ಗೆ 6 ಗಂಟೆಗೆ ನೋಡಿದಾಗ ಅದು ಕಳವಾಗಿರುವುದು ತಿಳಿದು ಬಂತು. ಈ ಬಗ್ಗೆ ಕಿರಣ್ ಪೊಲೀಸರಿಗೆ ದೂರು ನೀಡಿದ್ದಾರೆ.