ಕ್ಲಬ್‌ಗೆ ದಾಳಿ: 12 ಮಂದಿಯ ಸೆರೆ
Update: 2017-07-19 23:03 IST
ಮಂಗಳೂರು, ಜು.19: ನಗರದ ಬೆಂದೂರ್‌ವೆಲ್‌ನ ವಿನ್ನರ್ಸ್ ರಿಕ್ರಿಯೇಶನ್ ಕ್ಲಬ್‌ನಲ್ಲಿ ಜೂಜಾಡುತ್ತಿದ್ದ 12 ಮಂದಿಯನ್ನು ಕದ್ರಿ ಇನ್‌ಸ್ಪೆಕ್ಟರ್ ಮಾರುತಿ ಜಿ.ನಾಯಕ್ ಮಂಗಳವಾರ ದಾಳಿ ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯ ಜೊತೆಗೂಡಿ ದಾಳಿ ನಡೆಸಿದ ಪೊಲೀಸರು ಆರೋಪಿಗಳಾದ ಅಭಿನ್, ವಿಜಯ ಕುಮಾರ್, ವಿಶಾಲ್ ಶೆಟ್ಟಿ, ಅನೀಶ್. ಗೋಪಿನಾಥ್, ಉಮರ್ ಫಾರೂಕ್, ಮುಹಮ್ಮದ್ ಹನೀಫ್, ರಾಜು ಶೆಟ್ಟಿ ಯಾನೆ ಫ್ರೆಂಚ್ ಶೆಟ್ಟಿ, ಸನತ್ ಶೆಟ್ಟಿ, ಶ್ರೀಕಾಂತ್ ಪೂಜಾರಿ, ಚೇತನ್ ಪೂಜಾರಿ, ಅನಿಲ್ ಶೆಟ್ಟಿ ಎಂಬವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಜೂಜಾಟಕ್ಕೆ ಬಳಸಿದ್ದ 4,845 ರೂ. ಮತ್ತು 52 ಇಸ್ಪೀಟ್ ಎಲೆಗಳು ಹಾಗು ಫೈಬರ್ ಟೇಬಲನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.