ಚೆನ್ನೈನಲ್ಲಿ ಕಾಣಿಯೂರು ಶ್ರೀಗಳ ಚಾರ್ತುಮಾಸ್ಯ
Update: 2017-07-19 23:11 IST
ಉಡುಪಿ, ಜು.19: ಉಡುಪಿ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು ತಮ್ಮ 26ನೇ ಚಾರ್ತುಮಾಸ್ಯ ವೃತವನ್ನು ಜು.18ರ ಮಂಗಳವಾರ ಚೆನ್ನೈನ ಅಣ್ಣಾನಗರದ ಪಲಿಮಾರು ಮಠದಲ್ಲಿ ಪ್ರಾರಂಭಿಸಿದ್ದಾರೆ.
ಜು.18ರಿಂದ ಸೆ.6ರವರೆಗೆ ಚಾರ್ತುಮಾಸ್ಯ ವೃತ ದೀಕ್ಷೆಯಲ್ಲಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಣಿಯೂರು ಮಠದ ಪ್ರಕಟಣೆ ತಿಳಿಸಿದೆ.