ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣ
Update: 2017-07-19 23:12 IST
ಉಡುಪಿ, ಜು. 19: ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ ನೆಡೆಸಿದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಉಡುಪಿಯ ಪೂರ್ಣೇಂದು ಕಲಾ ಭಟ್ ಉತ್ತೀರ್ಣರಾಗಿದ್ದಾರೆ.
ಎನ್. ಭಾರತೀಶ ಬಲ್ಲಾಳ ಅಸೋಸಿಯೇಟ್‌ನಲ್ಲಿ ಆರ್ಟಿಕಲ್‌ಶಿಪ್ ತರಬೇತಿ ಪಡೆದ ಇವರು ಉಡುಪಿಯ ಯಕ್ಷಗಾನ ಕಲಾರಂಗದ ಜತೆ ಕಾರ್ಯದರ್ಶಿ ಪ್ರೊ.ನಾರಾಯಣ ಎಂ. ಹೆಗಡೆ ಅವರ ಪುತ್ರಿ ಹಾಗೂ ಬೆಂಗಳೂರಿನ ಎಂ. ಶ್ರೀಶಾ ಭಟ್ ಇವರ ಪತ್ನಿ.