ಮಾಯಾವತಿ ರಾಜೀನಾಮೆ ಅಂಗೀಕಾರ
Update: 2017-07-20 19:10 IST
ಹೊಸದಿಲ್ಲಿ, ಜು.20: ಬಿಎಸ್ಪಿ ನಾಯಕಿ ಮಾಯಾವತಿ ರಾಜ್ಯಸಭೆಗೆ ನೀಡಿದ್ದ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ರಾಜ್ಯಸಭೆಯ ಸಭಾಪತಿ ಹಾಮಿದ್ ಅನ್ಸಾರಿ ತಿಳಿಸಿದ್ದಾರೆ.
ದಲಿತರ ವಿರುದ್ಧ ಉತ್ತರಪ್ರದೇಶದಲ್ಲಿ ದೌರ್ಜನ್ಯ ನಡೆಯುತ್ತಿದ್ದು ಈ ಬಗ್ಗೆ ತನಗೆ ಮಾತನಾಡಲು ಅವಕಾಶ ನಿರಾಕರಿಸಲಾಗಿದೆ ಎಂದು ಆಕ್ರೋಶಗೊಂಡಿದ್ದ ಮಾಯಾವತಿ, ರಾಜೀನಾಮೆ ನೀಡುವುದಾಗಿ ಮಂಗಳವಾರ ಘೋಷಿಸಿ ಸದನದಿಂದ ಹೊರ ನಡೆದಿದ್ದರು.
ನನ್ನ ಹೇಳಿಕೆಯನ್ನು ಪ್ರಸ್ತುತಪಡಿಸಲು ಆಳುವ ಪಕ್ಷದವರು ಅವಕಾಶ ನೀಡದಿರುವುದು ೆ ನನ್ನ ರಾಜೀನಾಮೆಯನ್ನು ಸಮರ್ಥಿಸಿದಂತಾಗಿದೆ ಎಂದು ಮಾಯಾವತಿ ತಿಳಿಸಿದ್ದಾರೆ. ಉಪ ಸಭಾಪತಿ ಪಕ್ಷಪಾತ ತೋರಿದ್ದಾರೆ ಎಂದು ಆರೋಪಿಸಿದ ಅವರು, ಆಳುವ ಪಕ್ಷದ ಸದಸ್ಯರಿಗೆ ಸುಮ್ಮನಿರುವಂತೆ ಸೂಚಿಸುವ ಬದಲು ಅವರು ಬೆಲ್ ಬಾರಿಸಿ ನನಗೆ ಮಾತು ಮುಗಿಸಿ ಕುಳಿತುಕೊಳ್ಳಲು ತಿಳಿಸಿದರು ಎಂದು ಮಾಯಾವತಿ ಹೇಳಿದ್ದಾರೆ.