×
Ad

ಪಾಪ್ಯುಲರ್ ಫ್ರಂಟ್‌ನಿಂದ ‘ಉನ್ನತ ಶಿಕ್ಷಣ ಸ್ಕಾಲರ್‌ಶಿಪ್ -2017’ ಘೋಷಣೆ

Update: 2017-07-20 20:31 IST

ಹೊಸದಿಲ್ಲಿ, ಜು. 20: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ 2017 ಸ್ಕಾಲರ್‌ಶಿಪ್ ಕಾರ್ಯಕ್ರಮ ವನ್ನು ಘೋಷಿಸಿದೆ. ಈ ಯೋಜನೆಯು ಪಿಯುಸಿ(ಹೈಯರ್ ಸೆಕೆಂಡರಿ) ಪೂರ್ಣಗೊಳಿಸಿ ಉನ್ನತ ಶಿಕ್ಷಣ ಪಡೆಯಲು ಇಚ್ಛಿಸುವ ಬಡ ಮತ್ತು ಅರ್ಹ ವಿದ್ಯಾರ್ಥಿಗಳನ್ನು ಬೆಂಬಲಿಸುವ ಸದುದ್ದೇಶವನ್ನು ಹೊಂದಿದೆ.

2017-18ನೇ ಶೈಕ್ಷಣಿಕ ಸಾಲಿನಲ್ಲಿ ತಮ್ಮ ಕೋರ್ಸನ್ನು ಮುಂದುವರಿಸುತ್ತಿರುವ ವಿದ್ಯಾರ್ಥಿಗಳಿಂದ ಈ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಉನ್ನತ ಶಿಕ್ಷಣಕ್ಕಾಗಿರುವ ಈ ರಾಷ್ಟ್ರೀಯ ಸ್ಕಾಲರ್‌ಶಿಪ್ ಯೋಜನೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ಸತತ 7ನೇ ವರ್ಷದಲ್ಲಿ ಕಾರ್ಯಗತಗೊಳಿಸುತ್ತಿದೆ.
 

ಒಂದು ವರ್ಷದ ಅವಧಿಗಿಂತ ಕಡಿಮೆಯಲ್ಲದ ಸ್ನಾತಕೋತ್ತರ ಕೋರ್ಸ್, ಪದವಿ ಮತ್ತು ಡಿಪ್ಲೋಮ ಅಥವಾ ಇತರ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರು. ಪತ್ರಿಕೋದ್ಯಮ, ಕಾನೂನು ಮತ್ತು ಸಮಾಜ ಸೇವೆಯನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಆದ್ಯತೆಯನ್ನು ನೀಡಲಾಗುತ್ತದೆ. ಅರ್ಜಿಯನ್ನು ನಿಗದಿತ ದಿನಾಂಕದೊಳಗಾಗಿ  (www.popularfrontindia.org.) ಆನ್‌ಲೈನ್ ಮುಖಾಂತರ ಸಲ್ಲಿಸಬಹುದು.

ಪ್ರತೀ ವರ್ಷವೂ ಜುಲೈಯಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಆಗಸ್ಟ್ 31, 2017 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿರುತ್ತದೆ.

ಪಾಪ್ಯುಲರ್ ಫ್ರಂಟ್ ಸ್ಕಾಲರ್‌ಶಿಪ್ ವಿತರಣೆಯನ್ನು ರಾಷ್ಟ್ರಮಟ್ಟದಲ್ಲಿ 2011-12ರ ಶೈಕ್ಷಣಿಕ ಸಾಲಿನಲ್ಲಿ ಪ್ರಾರಂಭಿಸಿತು. ಇಲ್ಲಿಯ ವರೆಗೆ 13 ರಾಜ್ಯಗಳಾದ್ಯಂತ 5.2 ಕೋಟಿ ರೂ. 6482 (3890 ಹುಡುಗರು, 2592 ಹುಡುಗಿಯರು) ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ.

ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿಸುವ ನಿಟ್ಟಿನಲ್ಲಿ ಉದ್ಯೋಗ ಪಡೆದುಕೊಂಡ ಬಳಿಕ ಸ್ಕಾಲರ್‌ಶಿಪ್ ನಿಧಿಗೆ ಮತ್ತು ಸಮಾಜ ಸೇವೆಗಾಗಿ ಆರ್ಥಿಕ ರೂಪದಲ್ಲಿ ತಮ್ಮ ಕಾಣಿಕೆಯನ್ನು ಹಿಂದಿರುಗಿಸಬೇಕೆಂಬ ಅರಿವನ್ನು ಮೂಡಿಸುತ್ತೇವೆ ಎಂದು ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಮುಹಮ್ಮದ್ ಅಲಿ ಜಿನ್ನಾ ಹೊಸದಿಲ್ಲಿಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News