ಕಾರು ಢಿಕ್ಕಿ: ಗರ್ಭಿಣಿ ಮೃತ್ಯು
Update: 2017-07-20 21:25 IST
ಉಳ್ಳಾಲ, ಜು. 20: ಬೀರಿ ಸಂಕೊಳಿಗೆಯ ಬಳಿ ಕಾರು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಗರ್ಭಿಣಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.
ಉಳ್ಳಾಲದ ಅಳೇಕಲ ನಿವಾಸಿ ಆರೀಫ್ ಎಂಬವರ ಪತ್ನಿ ಅಫ್ಸಾ (20) ಮೃತರು ಎಂದು ಗುರುತಿಸಲಾಗಿದೆ.
ಸಂಕೊಳಿಗೆ ಸಭಾಂಗಣದಲ್ಲಿ ಸಂಬಂಧಿಕರ ಮದುವೆಯಲ್ಲಿ ಭಾಗವಹಿಸಿದ್ದ ಅಫ್ಸಾ ಮನೆಗೆ ಹಿಂದಿರುಗುವ ಸಂದರ್ಭ ಈ ಅಪಘಾತ ಸಂಭವಿಸಿದೆ.
ರಸ್ತೆ ದಾಟುತ್ತಿದ್ದ ಸಂದರ್ಭ ಕೇರಳದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಅಫ್ಸಾ ಅವರಿಗೆ ಢಿಕ್ಕಿ ಹೊಡೆದಿದೆ.
ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಂಜೆಯ ವೇಳೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಅಫ್ಸಾ ಅವರಿಗೆ ಎಂಟು ತಿಂಗಳ ಹಿಂದಯಷ್ಟೇ ವಿವಾಹವಾಗಿದ್ದು, ಇದೀಗ ಮೂರು ತಿಂಗಳ ಗರ್ಭಿಣಿಯಾಗಿದ್ದರು. ಉಳ್ಳಾಲ ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.