ಪಾಕ್ ನೆರವಿಗೆ ಕಠಿಣ ಶರತ್ತು: ಅಮೆರಿಕ ಸಂಸತ್ತು ಅಸ್ತು

Update: 2017-07-20 16:30 GMT

ವಾಶಿಂಗ್ಟನ್, ಜು. 20: ಅಮೆರಿಕದ ನೆರವನ್ನು ಪಡೆಯಲು ಪಾಕಿಸ್ತಾನಕ್ಕೆ ಕಠಿಣ ಶರತ್ತುಗಳನ್ನು ವಿಧಿಸಬೇಕೆಂಬ ಪ್ರಸ್ತಾಪಕ್ಕೆ ಅಮೆರಿಕದ ಹೌಸ್ ಅಪ್ರೋಪ್ರಿಯೇಶನ್ಸ್ ಕಮಿಟಿಯು ಗುರುವಾರ ಧ್ವನಿಮತದಿಂದ ಅಂಗೀಕಾರ ನೀಡಿದೆ ಹಾಗೂ ಭಯೋತ್ಪಾದಕ ಗುಂಪುಗಳ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ಪಾಕಿಸ್ತಾನ ವಿಫಲವಾದರೆ ನೆರವನ್ನು ತಡೆಹಿಡಿಯುವ ಅಧಿಕಾರವನ್ನು ವಿದೇಶಾಂಗ ಕಾರ್ಯದರ್ಶಿಗೆ ನೀಡಿದೆ.

2018ರ ವಿದೇಶ ಕಾರ್ಯಾಚರಣೆಗಳ ಮರುಪೂರಣ ಮಸೂದೆಗೆ ಸಮಿತಿಯು ಅಂಗೀಕಾರ ನೀಡಿದೆ.

ನೆರವನ್ನು ಪಡೆಯಬೇಕಾದರೆ ಪಾಕಿಸ್ತಾನವು ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂಬ ಶರತ್ತುಗಳನ್ನು ಮಸೂದೆ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News