ನ್ಯಾಯಾಧೀಶರ ನೇಮಕ: ಕೇಂದ್ರದಿಂದ ಸುಪ್ರೀಂ ಕೋರ್ಟ್‌ಗೆ ಪತ್ರ

Update: 2017-07-20 16:35 GMT

ಹೊಸದಿಲ್ಲಿ, ಜು. 20: ಸರಕಾರ ಹಾಗೂ ನ್ಯಾಯಾಂಗದ ತಿಕ್ಕಾಟಕ್ಕೆ ಕಾರಣವಾಗಿರುವ ಪ್ರಮುಖ ಅಂಶವಾದ ಪ್ರಸಕ್ತ ನ್ಯಾಯಾಧೀಶರು ನ್ಯಾಯಾಧೀಶರನ್ನು ನೇಮಕ ಮಾಡುವ ವ್ಯವಸ್ಥೆಯನ್ನು ಪರಿಶೀಲಿಸುವಂತೆ ಕೇಂದ್ರ ಸರಕಾರ ಮತ್ತೆ ಸುಪ್ರೀಂ ಕೋರ್ಟ್ ಕೊಲೀಜಿಯಂಗೆ ಪತ್ರ ಬರೆದಿದೆ.

ಕಾನೂನು ಸಚಿವಾಲಯ ಇತ್ತೀಚೆಗಿನ ಪತ್ರ ಸುಪ್ರೀಂ ಕೋರ್ಟ್‌ನ ಜುಲೈ 5ರ ತೀರ್ಪನ್ನು ಉಲ್ಲೇಖಿಸಿದೆ. ನ್ಯಾಯಾಧೀಶರ ನೇಮಕ ಹಾಗೂ ಆಯ್ಕೆ ಪ್ರಕ್ರಿಯೆಯನ್ನು ಮರು ಪರಿಶೀಲಿಸುವ ಅಗತ್ಯತೆ ಇದೆ ಎಂದು ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಹೇಳಿದ್ದರು.

ಉಚ್ಚ ನ್ಯಾಯಾಲಯ, ಸುಪ್ರೀಂ ಕೋರ್ಟ್‌ಗೆ ಮಾಡಲಾದ ನ್ಯಾಯಾಧೀಶರ ನೇಮಕವನ್ನು ಭಾರತದ ಅತ್ಯುಚ್ಛ ಐದು ನ್ಯಾಯಾಧೀಶರನ್ನು ಒಳಗೊಂಡು ಸುಪ್ರೀಂ ಕೋರ್ಟ್‌ನ ಕೊಲೀಂಜಿಯಂ ಮರು ಪರಿಶೀಲಿಸಲು ಬಯಸುತ್ತಿದೆಯೇ ಎಂದು ಪ್ರಶ್ನಿಸಿ ಕೇಂದ್ರ ಸರಕಾರ ಕಳೆದ ವಾರ ಸುಪ್ರೀಂ ಕೋರ್ಟ್‌ನ ರಿಜಿಸ್ಟಾರ್ ಜನರಲ್‌ಗೆ ಪತ್ರ ಬರೆದಿತ್ತು.

 ನಿವೃತ್ತ ನ್ಯಾಯಮೂರ್ತಿ ಸಿಎಸ್ ಕರ್ಣನ್ ನ್ಯಾಯಾಂಗ ನಿಂದನೆ ಪ್ರಕರಣದ ತೀರ್ಪಿನಲ್ಲಿ ಜಸ್ಠಿ ಚಲೇಮಶ್ವರ್ ಹಾಗೂ ರಂಜನ್ ಗಗೋಯ್, ನ್ಯಾಯಾಂಗ ನಿಂದನೆಗೆ ಒಳಗಾದ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳಲು ಮಬಾಭಿಯೋಗದ ಬದಲು ಸೂಕ್ತ ಕಾನೂನು ಅವಶ್ಯಕತೆ ಇದೆ ಎಂದು ಹೇಳಿದ್ದರು.

ಮಹಾಭಿಯೋಗ ತುಂಬಾ ನಿಧಾನದ ಪ್ರಕ್ರಿಯೆ. ದೇಶದಲ್ಲಿ ಇದುವರೆಗೆ ಯಾರೊಬ್ಬ ನ್ಯಾಯಾಧೀಶರ ವಿರುದ್ಧವೂ ಮಹಾಭಿಯೋಗ ಅನ್ವಯಿಸಿಲ್ಲ.

ಬಿಜೆಪಿ ನೇತತ್ವದ ಎನ್‌ಡಿಎ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೊದಲ ವರ್ಷ ಸಂಸತ್ತು ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ ಕಾಯ್ದೆಯನ್ನು ಅಂಗೀಕರಿಸಿತ್ತು. ಅದು 2015 ಎಪ್ರಿಲ್ 13ರಂದು ಅನುಷ್ಠಾನಗೊಂಡಿತ್ತು.

ಆದರೆ, ಈ ಕಾನೂನು ಎರಡು ದಶಕಗಳ ಇತಿಹಾಸವುಳ್ಳ ಕೊಲೀಜಿಯಂ ವ್ಯವಸ್ಥೆಯನ್ನು ಕೊನೆಗೊಳಿಸುವ ಉದ್ದೇಶ ಹೊಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News