ಗಾಳಿ-ಮಳೆಗೆ ಜಿಲ್ಲೆಯಾದ್ಯಂತ ಮನೆಗಳಿಗೆ ಹಾನಿ

Update: 2017-07-20 16:45 GMT

ಉಡುಪಿ, ಜು.20:  ರಾತ್ರಿ ಬೀಸಿದ ಭಾರೀ ಗಾಳಿ-ಮಳೆಗೆ ಜಿಲ್ಲೆಯ ಅನೇಕ ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.

ಉಡುಪಿ ತಾಲೂಕು ತೆಂಕ ಗ್ರಾಮದ ನಾರಾಯಣ ಪೂಜಾರಿ ಎಂಬವರ ವಾಸ್ತವ್ಯದ ಮನೆ ಮೇಲೆ ಮರಬಿದ್ದು ಭಾಗಶ: ಹಾನಿಯಾಗಿದ್ದು 75,000ರೂ. ನಷ್ಟವಾಗಿದೆ. ಅದೇ ಗ್ರಾಮದ ನೀಲಾ ಶೆಟ್ಟಿ ಅವರ ಮನೆಯ ಹೆಂಚು ಹಾರಿ ಹೋಗಿ 30,000ರೂ. ನಷ್ಟವಾಗಿದೆ.
ಕುಂದಾಪುರ ತಾಲೂಕು ಕಟ್‌ಬೆಲ್ತೂರು ಗ್ರಾಮದ ಮುತ್ತು ಎಂಬವರ ಮನೆ ಮೇಲೆ ಮರಬಿದ್ದು 50,000ರೂ., ಅದೇ ಗ್ರಾಮದ ರಾಧಾ ಎಂಬವರ ಮನೆ ಮೇಲೆ ತೆಂಗಿನ ಮರಬಿದ್ದು 50,000ರೂ., ಕಾರ್ಕಳ ತಾಲೂಕು ಪಳ್ಳಿ ಗ್ರಾಮದ ಸರೋಜಿನಿ ಆಚಾರ್ಯರ ಮನೆ ಮೇಲೆ ಮರಬಿದ್ದು 8,000ರೂ. ನಷ್ಟ ಸಂಭವಿಸಿದೆ.
 

ನಿನ್ನೆ ಅಪರಾಹ್ನ 3:30ರ ಸುಮಾರಿಗೆ ಕಾರ್ಕಳ ತಾಲೂಕು ನೀರೆ ಗ್ರಾಮದ ಐದು ಅಂಗಡಿಗಳ ಸಿಮೆಂಟ್ ಶೀಟುಗಳು ಗಾಳಿಗೆ ಹಾರಿಹೋಗಿದ್ದು 50,000ರೂ. ನಷ್ಚವಾಗಿದೆ. ಮುಂಡ್ಕೂರು ಗ್ರಾಮದ ಕೃಷ್ಣ ಕರ್ಕೇರ ಮನೆ ಮೇಲೆ ಅಡಿಕೆ ಬಿದ್ದು 8,000ರೂ., ಅದೇ ಗ್ರಾಮದ ತೆಂಗವೇಲು ಮನೆಯ ದನದ ಕೊಟ್ಟಿಗೆ ಗೋಡೆ ಭಾಗಶ: ಕುಸಿದು 8,000 ರೂ.ನಷ್ಟವಾದ ಬಗ್ಗೆ ವರದಿಗಳು ಬಂದಿವೆ.

ಕಾರ್ಕಳ ತಾಲೂಕಿನ ಹೆರ್ಮುಂಡೆ ಗ್ರಾಮದ ವಿನೋದ ಶೆಟ್ಟಿ ಅವರ ಮನೆ ಮೇಲೆ ಮರ ಬಿದ್ದು 15,000ರೂ., ನಂದಳಿಕೆ ಗ್ರಾಮದ ಪಾಂಡು ಶೆಟ್ಟಿ ಮನೆಯ ಹೆಂಚುಗಳು ಗಾಳಿಗೆ ಹಾರಿಹೋಗಿ 10,000 ರೂ., 12) ಅದೇ ಗ್ರಾಮದ ಎಸ್.ಮೆಂಡೋನ್ಸಾ ಅವರ ಮನೆಯ ಮೇಲೆ ಹುಣಸೆ ಮರ ಬಿದ್ದು 30,000 ರೂ., ಕಸಬಾ ಗ್ರಾಮದ ಪೆರ್ವಾಶೆ ನಿವಾಸಿ ಪಿ.ವೇಣುಗೋಪಾಲ ಭಟ್ಟರ ಕೊಟ್ಟಿಗೆ ಹಾಗೂ ಬಚ್ಚಲು ಮನೆ ಮೇಲೆ ಮರ ಬಿದ್ದು 75,000ರೂ., ದುರ್ಗಾ ತೆಳ್ಳಾರು ಗ್ರಾಮದ ಗಣಪತಿ ಭಟ್ಟರ ಮನೆ ಗಾಳಿಮಳೆಯಿಂದ ಭಾಗಶ ಹಾನಿಯಾಗಿದ್ದು 50,000 ರೂ. ಹಾಗೂ ಬೆಳ್ಮಣ್ಣು ಗ್ರಾಮದ ಕಡೆಗುಟ್ಟು ನಿವಾಸಿ ವಲೇರಿಯನ್ ಪುಟಾಗು ಎಂಬವರ ವಾಸ್ತವ್ಯದ ಮನೆ ಮೇಲೆ ನಿನ್ನೆ ರಾತ್ರಿ ಮರ ಬಿದ್ದು 30,000ರೂ. ನಷ್ಟ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News