ಮೃತ ಯುವಕನನ್ನು ಆಸ್ಪತ್ರೆಯಿಂದ ಬಿಡಿಸಿಕೊಳ್ಳಲು ನೆರವಾದ ಪಿಎಫ್‌ಐ ಕಾರ್ಯಕರ್ತರು

Update: 2017-07-20 18:25 GMT

ಮಂಗಳೂರು, ಜು. 20: ಕಿಡ್ನಿ ಸಂಬಂಧಿ ಕಾಯಿಲೆಯಿಂದ ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಾಗಿ ಮೃತಪಟ್ಟ ಯುವಕನೋರ್ವನನ್ನು ಆಸ್ಪತ್ರೆಯಿಂದ ಬಿಡಿಸಿಕೊಳ್ಳಲು ಹಣವಿಲ್ಲದೆ ಪರದಾಡುತ್ತಿದ್ದ ಕುಟುಂಬವನ್ನು ಪಿಎಫ್‌ಐ ಕಾರ್ಯಕರ್ತರು ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಅಬ್ದುಲ್ ಮುನಾಫ್ (35) ಎಂಬವರು 14 ದಿನಗಳಿಂದ ಕಿಡ್ನಿ ಸಂಬಂಧಿತ ರೋಗದ ಚಿಕಿತ್ಸೆಗಾಗಿ ದೇರಳಕಟ್ಟೆ ಸಮೀಪದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಬುಧವಾರ ಮಧ್ಯಾಹ್ನ 1 ಗಂಟೆಗೆ ನಿಧನರಾಗಿದ್ದರು. ಆದರೆ, ಮೃತರ ಸಂಬಂಧಿಕರಲ್ಲಿ ಆಸ್ಪತ್ರೆಯ ಬಿಲ್ಲು 90,400 ರೂ. ಭರಿಸಲು ಹಣವಿಲ್ಲದೆ ಪರದಾಡುತ್ತಿದ್ದರು.

ವಿಷಯ ತಿಳಿದ ಪಿಎಫ್‌ಐ ಕಾರ್ಯಕರ್ತರು ಆಸ್ಪತ್ರೆಗೆ ಧಾವಿಸಿ ಆಸ್ಪತ್ರೆಯ ಆಡಳಿತ ವರ್ಗದವರಲ್ಲಿ ಮಾತನಾಡಿ 23,200ರೂ. ವನ್ನು ಕಡಿತ ಗೊಳಿಸಿ ಉಳಿದ ಮೊತ್ತವನ್ನು ಸ್ಥಳೀಯ ಸಂಘ, ಸಂಸ್ಥೆ ಮತ್ತು ದಾನಿಗಳಿಂದ ಸಂಗ್ರಹಿಸಿ ಆಸ್ಪತ್ರೆಗೆ ಪಾವತಿಸಿದರು. ಬಳಿಕ ಮುನಾಫ್ ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿ ಊರಿಗೆ ಕಳುಹಿಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News