ಕಾರು ಚಲಾಯಿಸಿ ಎಎಸ್ಐ ಕೊಲೆಗೆ ಯತ್ನಿಸಿದ ದರೋಡೆ ಆರೋಪಿ
Update: 2017-07-21 18:04 IST
ಮಂಗಳೂರು, ಜು.21: ದರೋಡೆಗೆ ಸಂಚು ರೂಪಿಸುತ್ತಿದ್ದವನನ್ನು ಬಂಧಿಸಲು ತೆರಳಿದ್ದ ಎಎಸ್ಐಯನ್ನು ದರೋಡೆ ಆರೋಪಿ ಕೊಲೆಗೈಯಲು ಯತ್ನಿಸಿದ ಘಟನೆ ಘಟನೆ ಕಸಬಾ ಬೆಂಗ್ರೆಯಲ್ಲಿ ನಡೆದಿದೆ.
ಹದಿನೈದಕ್ಕೂ ಹೆಚ್ಚು ಪ್ರಕರಣಗಳ ಆರೋಪಿಯಾಗಿರುವ ರೌಡಿ ಶೀಟರ್ ಹಾರಿಸ್ ನನ್ನು ಬಂಧಿಸಲು ಎಎಸ್ಐ ಪುರಂದರ ಗೌಡರ ನೇತೃತ್ವದಲ್ಲಿ ಎರಡು ತಂಡ ತೆರಳಿತ್ತು. ವಿಷಯ ತಿಳಿದ ಹಾರಿಸ್ ತನ್ನ ಮೂವರು ಸಹಚರರೊಂದಿಗೆ ಕಾರಿನಲ್ಲಿ ತಪ್ಪಿಸುವಾಗ ಎಎಸ್ಐ ಪುರಂದರ ಗೌಡರ ಮೇಲೆ ಕಾರು ಹರಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ. ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ ಹೊಡೆದಿದೆ. ತನ್ನ ಮೂವರು ಸಹಚರರೊಂದಿಗೆ ಹಾರಿಸ್ ಪರಾರಿಯಾಗಿದ್ದಾನೆ. ಪುರಂದರ ಗೌಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾರಿಸ್ ಮೇಲೆ ಪಣಂಬೂರು ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.