ಅಮಾನ್ಯಕ್ಕೆ ಮೊದಲಿದ್ದ ನೋಟುಗಳ ಪೈಕಿ ಶೇ.85 ಈಗ ಚಲಾವಣೆಯಲ್ಲಿವೆ: ಮೇಘ್ವಾಲ್

Update: 2017-07-21 13:19 GMT

ಹೊಸದಿಲ್ಲಿ,ಜು.21: ನೋಟು ರದ್ದತಿಗೆ ಮುನ್ನ ಚಲಾವಣೆಯಲ್ಲಿದ್ದ ನೋಟುಗಳ ಪ್ರಮಾಣಕ್ಕೆ ಹೋಲಿಸಿದರೆ ಶೇ.85ಕ್ಕೂ ಅಧಿಕ ನೋಟುಗಳು ಈಗ ಚಲಾವಣೆಯಲ್ಲಿವೆ ಮತ್ತು ನೋಟುಗಳ ಪೂರೈಕೆಯನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಹಾಯಕ ವಿತ್ತಸಚಿವ ಅರ್ಜುನ ರಾಮ್ ಮೇಘ್ವಾಲ್ ಅವರು ಶುಕ್ರವಾರ ಲೋಕಸಭೆ ಯಲ್ಲಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು.

2018,ಅ.28ಕ್ಕೆ ಇದ್ದಂತೆ 17,540.22 ಶತಕೋಟಿ ನೋಟುಗಳು ದೇಶದಲ್ಲಿ ಚಲಾವಣೆಯಲ್ಲಿದ್ದವು. 2017,ಜೂ.23ಕ್ಕೆ ಇದ್ದಂತೆ 15,074.43 ಶತಕೋಟಿ ನೋಟು ಗಳು ಚಲಾವಣೆಯಲ್ಲಿವೆ ಎಂದು ತಿಳಿಸಿದ ಅವರು, ದೇಶದ ವಿವಿಧ ಭಾಗಗಳಲ್ಲಿ ಕರೆನ್ಸಿ ನೋಟುಗಳ ಲಭ್ಯತೆಯ ಕುರಿತು ನಿರಂತರ ನಿಗಾ ವಹಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News