ಚಂದ್ರನಿಂದ ಮಣ್ಣಿನ ಮಾದರಿ ತಂದ ಚೀಲ 11.5 ಕೋಟಿ ರೂ.ಗೆ ಹರಾಜು

Update: 2017-07-21 16:37 GMT

ನ್ಯೂಯಾರ್ಕ್, ಜು. 21: ಚಂದ್ರನಿಂದ ಮಣ್ಣಿನ ಮಾದರಿಗಳನ್ನು ಭೂಮಿಗೆ ತರಲು ಅಮೆರಿಕದ ಗಗನಯಾತ್ರಿ ನೀಲ್ ಆರ್ಮ್‌ಸ್ಟ್ರಾಂಗ್ ಬಳಸಿದ್ದ ಕೈಚೀಲವು, ನ್ಯೂಯಾರ್ಕ್‌ನಲ್ಲಿ ಗುರುವಾರ ನಡೆದ ಹರಾಜಿನಲ್ಲಿ 1.8 ಮಿಲಿಯ ಡಾಲರ್ (11.58 ಕೋಟಿ ರೂಪಾಯಿ) ಮೊತ್ತಕ್ಕೆ ಹರಾಜಾಗಿದೆ.

ಚಂದ್ರನ ಮೇಲೆ ಮಾನವ ಕಾಲಿಟ್ಟ 48ನೆ ವಾರ್ಷಿಕ ದಿನದ ಸಂದರ್ಭದಲ್ಲಿ ಈ ಹರಾಜು ಏರ್ಪಡಿಸಲಾಗಿತ್ತು.

ಈ ಚೀಲವು ಹ್ಯೂಸ್ಟನ್‌ನ ಜಾನ್ಸನ್ ಬಾಹ್ಯಾಕಾಶ ಕೇಂದ್ರದ ಡಬ್ಬವೊಂದರಲ್ಲಿ ಹಲವಾರು ವರ್ಷಗಳ ಕಾಲ ಅನಾಥವಾಗಿ ಬಿದ್ದುಕೊಂಡಿತ್ತು.

ಟೆಲಿಫೋನ್‌ನಲ್ಲಿ ಬಿಡ್ ಸಲ್ಲಿಸಿದ ವ್ಯಕ್ತಿಯೊಬ್ಬರು ಈ ಚೀಲವನ್ನು ಪಡೆದುಕೊಂಡರು. ಆದರೆ, ಅವರು ಸಾರ್ವಜನಿಕವಾಗಿ ತನ್ನನ್ನು ಗುರುತಿಸಿಕೊಳ್ಳಲು ನಿರಾಕರಿಸಿದರು ಎಂದು ಹರಾಜು ಸಂಸ್ಥೆ ‘ಸಾದ್‌ಬೀಸ್’ ಹೇಳಿದೆ.

ಚೀಲವು 2 ಮಿಲಿಯ ಡಾಲರ್‌ನಿಂದ 4 ಮಿಲಿಯ ಡಾಲರ್‌ವರೆಗೆ ಹರಾಜಾಗಬಹುದು ಎಂಬುದಾಗಿ ಹರಾಜು ಸಂಸ್ಥೆ ನಿರೀಕ್ಷಿಸಿತ್ತು.

1969ರ ಜುಲೈಯಲ್ಲಿ ಆರ್ಮ್‌ಸ್ಟ್ರಾಂಗ್ ಮತ್ತು ಅವರ ಅಪೋಲೊ 11 ನೌಕೆಯ ತಂಡ ಚಂದ್ರನ ಮೇಲೆ ಕಾಲಿಟ್ಟು ಮರಳಿದ ಬಳಿಕ ಈ ಸಣ್ಣ ಚೀಲವು ದಶಕಗಳ ಕಾಲ ನಾಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News