ಜು.22: ಹಜ್ ಯಾತ್ರಾರ್ಥಿಗಳ ನೋಂದಣಿ

Update: 2017-07-21 14:15 GMT

ಮಂಗಳೂರು, ಜು.21: ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರಾರ್ಥಿಗಳ ನೋಂದಣಿ ಕಾರ್ಯವು ಜು.22ರಂದು ಬೆಳಗ್ಗೆ 10ಕ್ಕೆ ಬಜ್ಪೆ ಹಳೆ ವಿಮಾನ ನಿಲ್ದಾಣದಲ್ಲಿ ಆರಂಭಗೊಳ್ಳಲಿದ್ದು, ಯಾತ್ರಾರ್ಥಿಗಳು ನಿಗದಿತ ಸಮಯಕ್ಕೆ ತಮ್ಮ ಲಗ್ಗೇಜು, ಕನ್ಫರ್ಮೇಶನ್ ಲೆಟರ್ ಹಾಗೂ ಹಣ ಪಾವತಿ ರಶೀದಿಯೊಂದಿಗೆ ಬಜ್ಪೆ ಹಳೆಯ ವಿಮಾನ ನಿಲ್ದಾಣಕ್ಕೆ ಆಗಮಿಸಲು ಸೂಚಿಸಲಾಗಿದೆ.
 
ಜು.24, 25, 26ರಂದು ಹಜ್ ವಿಮಾನಗಳು ಮಂಗಳೂರಿನಿಂದ ನೇರವಾಗಿ ಮದೀನಾಕ್ಕೆ ಹೊರಡಲಿದೆ. ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಜು.24ರಂದು ಪೂ.11 ಗಂಟೆಗೆ ಬಜ್ಪೆಅನ್ಸಾರ್ ಶಾಲೆಯಲ್ಲಿ ನಡೆಯಲಿದೆ.

ರಾಜ್ಯ ಹಜ್ ಸಚಿವ ಆರ್. ರೋಶನ್ ಬೇಗ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಭಯ ಜಿಲ್ಲೆಯ ಖಾಝಿಗಳು, ಜನಪ್ರತಿನಿಧಿಗಳು, ಸಮಾಜದ ಪ್ರಮುಖರು ಭಾಗವಹಿಸಲಿದ್ದಾರೆ.

ಜು.24ರಂದು ಸಂಜೆ 4:15ಕ್ಕೆ ಹಜ್ ಯಾತ್ರಿಕರ ಮೊದಲ ತಂಡದ ಯಾನ ಹೊರಟರೆ, ಜು.25 ಮತ್ತು 26ರಂದು ಕ್ರಮವಾಗಿ ಮಧ್ಯಾಹ್ನ 12:45 ಮತ್ತು ಸಂಜೆ 4:15ಕ್ಕೆ ವಿಮಾನ ಹೊರಡಲಿದೆ ಎಂದು ರಾಜ್ಯ ಹಜ್ ಕಮಿಟಿ ಸದಸ್ಯ ಕೆ.ಎಂ. ಅಬೂಬಕರ್ ಸಿದ್ದೀಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News