​ಖಾಸಗಿ ಆಧಾರ ನೋಂದಣಿ ಕೇಂದ್ರ ಪುನ: ಸ್ಥಾಪನೆಗೆ ಮನವಿ

Update: 2017-07-21 14:21 GMT

ಮಂಗಳೂರು, ಜು.21: ಕೇಂದ್ರ ಸರಕಾರದ ಆದೇಶದಂತೆ ಅಧಾರ್ ನೋಂದಣಿ ಮಾಡುವ ಖಾಸಗಿ ಕೇಂದ್ರಗಳು ಮುಚ್ಚಿರುವುದರಿಂದ ಜನರಿಗೆ ತೊಂದರೆ ಆಗಿದೆ. ಆಧಾರ್ ನೋಂದಣಿ ಕಡ್ಡಾಯವಾದ ಕಾರಣ ಜನರಿಗೆ ಇದರಿಂದ ತೊಂದರೆಯಾಗಿದೆ. ನಾಡ ಕಚೇರಿ ಮತ್ತು ಜಿಲ್ಲಾ ಕಚೇರಿಯಲ್ಲಿ ಆಧಾರ್ ಕಾರ್ಡ್ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಅಲ್ಲಿ ಈಗಾಗಲೆ ಅಕ್ಟೋಬರ್‌ವರೆಗೆ ಟೋಕನ್ ನೀಡಲಾಗಿದೆ. ಅಷ್ಟರವರೆಗೆ ಕಾಯಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಖಾಸಗಿ ಕೇಂದ್ರದಲ್ಲಿ ನೋಂದಣಿ ಪ್ರಕ್ರಿಯೆ ಮತ್ತೆ ಆರಂಭಿಸಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News