ಉಳ್ಳಾಲ: ಬಾವಾ ಫಕೀರ್ ಸಾಹೇಬ್ ಅನುಸ್ಮರಣೆ
ಮಂಗಳೂರು, ಜು.21: ಉಳ್ಳಾಲ ದರ್ಗಾ ಸಮಿತಿಯಲ್ಲಿ 38 ವರ್ಷ ಸುದೀರ್ಘ ಅವಧಿಗೆ ಸದಸ್ಯರಾಗಿದ್ದು, ಇತ್ತೀಚೆಗೆ ನಿಧನರಾದ ಬಾವಾ ಫಕೀರ್ ಸಾಹೇಬ ಅವರ ಅನುಸ್ಮರಣಾ ಕಾರ್ಯಕ್ರಮ ಮೇಲಂಗಡಿ ಹೊಸಪಳ್ಳಿ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, 30 ವರ್ಷ ಮೇಲಂಗಡಿ ಹೊಸಪಳ್ಳಿ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷರಾಗಿ, 38 ವರ್ಷ ದರ್ಗಾ ಸಮಿತಿ ಸದಸ್ಯರಾಗಿ ಸುದೀರ್ಘ ಅವಧಿಯಲ್ಲಿ ಬಾವಾ ಫಕೀರ್ ಮಸೀದಿ ಅಭಿವೃದ್ಧಿಗೆ ಸಲ್ಲಿಸಿದ ಸೇವೆ ಅನನ್ಯ ಎಂದರು.
ಮೇಲಂಗಡಿ ಹೊಸಪಳ್ಳಿ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾಹಿ ದುಆ ನೆರವೇರಿಸಿದರು. ಮೇಲಂಗಡಿ ಜುಮಾ ಮಸೀದಿಯ ಅಧ್ಯಕ್ಷ ಫಾರೂಕ್ ಉಳ್ಳಾಲ್, ಆಝಾದ್ ನಗರ ಮಸೀದಿಯ ಮಾಜಿ ಅಧ್ಯಕ್ಷ ಬಾವಾ ಅಹ್ಮದ್, ಸಮಸ್ತ ನಾಯಕ ಯು.ಟಿ. ಮುಹಮ್ಮದ್, ಕೆ.ಎಸ್.ಮೊಯ್ದಿನ್, ಅರಬಿಕ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮೀರ್, ಕಾರ್ಯದರ್ಶಿ ಆಸೀಫ್ ಅಬ್ದುಲ್ಲ, ಕೋಶಾಧಿಕಾರಿ ಅಬ್ಬಾಸ್ ಕೆನರಾ, ಮೇಲಂಗಡಿ ಹೊಸಪಳ್ಳಿ ಮಸೀದಿಯ ಉಪಾಧ್ಯಕ್ಷ ಬಶೀರ್ ಗುಂಡಿಹಿತ್ಲು, ಪ್ರಧಾನ ಕಾರ್ಯದರ್ಶಿ ರಝಾಕ್ ಹರೇಕಳ, ಕೋಶಾಧಿಕಾರಿ ಅಬ್ದುಲ್ ಲತೀಫ್, ಬಶೀರ್ ಇಸ್ಮಾಯಿಲ್, ಸದರ್ ಮುಅಲ್ಲಿಮ್ ಜುನೈದ್ ಮೌಲವಿ, ಉಸ್ಮಾನ್ ಮದನಿ, ಸಿದ್ದೀಕ್ ಝುಹ್ರಿ, ಕಮಿಟಿ ಸದಸ್ಯರಾದ ಅಶ್ರಫ್ ಮೇಲಂಗಡಿ, ರಶೀದ್ ಮುಹಮ್ಮದ್, ರಹಮತುಲ್ಲಾ, ಇಬ್ರಾಹೀಂ ಮೇಲಂಗಡಿ, ಮುಹಮ್ಮದ್ ಅಸ್ಲಾಂ, ಅಹ್ಮದ್, ಹೈದರ್ ಉಳ್ಳಾಲ ಬೈಲ್, ಇಲ್ಯಾಸ್, ಇಸ್ಮಾಯಿಲ್ ನುಸ್ರತ್ ಉಪಸ್ಥಿತರಿದ್ದರು. ರಹೀಂ ಮುಟ್ಟಿಕ್ಕಲ್ ಕಾರ್ಯಕ್ರಮ ನಿರೂಪಿಸಿದರು.