×
Ad

ಸುಲ್ತಾನ್ ನಗರ: ಮದ್ರಸ ಪುಸ್ತಕ ವಿತರಣೆ

Update: 2017-07-21 20:32 IST

ಬಂಟ್ವಾಳ, ಜು. 21: ನಾವೂರು ಸಮೀಪದ ಸುಲ್ತಾನ ನಗರದ ಬದ್ರಿಯಾ ಜುಮಾ ಮಸೀದಿ ಆಡಳಿತ ಸುತಿಯು, ಮುಸ್ತಫಾ ಉಡುಪಿ ಅವರ ಹೆಸರಿನಲ್ಲಿ ವರ್ಷಂಪ್ರತಿ ನಡೆಸುವ ಮದ್ರಸ ಪುಸ್ತಕ ತರಣೆ ಕಾರ್ಯಕ್ರಮವು ದಾಯತ್ ಇಸ್ಲಾಂ ಮದ್ರಸ ಹಾಲ್‌ನಲ್ಲಿ ಇತ್ತೀಚಿಗೆ ನಡೆುತು.

 ಖತೀಬ್ ಅಬ್ದುಲ್ ರಶೀದ್ ಪೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಮುಸ್ತಫಾ ಉಡುಪಿಯವರ ತಂದೆ ಅಬ್ದುಲ್ ರಝಾಕ್ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಿದರು.

ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಅಬ್ದುಲ್ ಅಝೀಝ್, ಕಾರ್ಯದರ್ಶಿ ಅಶ್ರಫ್, ಉಪಾಧ್ಯಕ್ಷ ಮಹಮ್ಮದ್ ಫಾರೂಖ್, ಕೋಶಾಧಿಕಾರಿ ಅಹಮದ್ ಬಾವ, ಕಾದ್ರಿಯಾ ಯಂಗ್ ಮೆನ್ಸ್ ಅಧ್ಯಕ್ಷ ನಝೀರ್, ಅಧ್ಯಾಪಕ ಅಹಮದ್ ಕಬೀರ್ ಮತ್ತಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News