ಕ್ಯಾಣಪುರ: ಜಿಎಸ್‌ಟಿ ಕುರಿತು ಸಂವಾದ

Update: 2017-07-21 15:11 GMT

ಉಡುಪಿ, ಜು.21: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ವತಿಯಿಂದ ಜಿಎಸ್‌ಟಿ ವಿಷಯದ ಕುರಿತು ಸಂವಾದ ಕಾರ್ಯಕ್ರಮ ವನ್ನು ಇತ್ತೀಚೆಗೆ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಅರ್ಥ ಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊ.ಡಾ.ನೋರ್ಬರ್ಟ್ ಲೋಬೋ ಮಾತನಾಡಿ, ಜಿಎಸ್‌ಟಿಯ ಜಾರಿಯು ಒಂದು ಐತಿಹಾಸಿಕ, ಕ್ರಾಂತಿಕಾರಿ ಕ್ರಮ ಮಾತ್ರವಲ್ಲದೆ, ಅದು ಅನಿವಾರ್ಯವಾಗಿತ್ತು. ಮುಂದಿನ ದಿನಗಳಲ್ಲಿ ಜಿಎಸ್‌ಟಿಯು ದೇಶದ ಹಿತಕ್ಕೆ ಪೂರಕವಾಗಲಿದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹೆರಾಲ್ಡ್ ಮೊನಿಸ್ ಸ್ವಾಗತಿಸಿದರು. ಪ್ರೊ.ಶೈಲೆಟ್ ಮಥಾಯಸ್ ವಂದಿಸಿದರು. ಜ್ಯೋತ್ಸ್ನಾ ಲೂವಿಸ್ ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News