×
Ad

​ ಅನಿಲಕಟ್ಟೆ: ಜು.25ರಂದು ಮಡವೂರ್ ಮೌಲೀದ್

Update: 2017-07-21 20:46 IST

ವಿಟ್ಲ, ಜು.21: ಅನಿಲಕಟ್ಟೆಯ ಮಡವೂರ್ ಸಿ.ಎಂ.ವಲಿಯುಲ್ಲಾಹಿ ಮಖಾಂ ಯತೀಂ ಖಾನಾ ಎಜುಕೇಶನಲ್ ಮತ್ತು ಕಲ್ಚರಲ್ ಕಾಂಪ್ಲೆಕ್ಸ್ (ಎಂಸಿಎಂಒಇ ಆ್ಯಂಡ್ ಸಿಸಿ) ಅಧೀನದಲ್ಲಿ ಜು.25ರಂದು ಮಡವೂರ್ ಮೌಲೀದ್ ಕಾರ್ಯಕ್ರಮ ನಡೆಯಲಿದೆ.

ಅಂದು ಬೆಳಗ್ಗೆ 10 ಗಂಟೆಗೆ ಸಂಸ್ಥೆಯ ಕಟ್ಟಡದಲ್ಲಿ ಜರಗುವ ಕಾರ್ಯಕ್ರಮಕ್ಕೆ ಸೈಯದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ಮತ್ತು ಶೈಖುನಾ ಅಬ್ದುಲ್ ಜಬ್ಬಾರ್ ಮಿತ್ತಬೈಲ್ ಉಸ್ತಾದ್ ನೇತೃತ್ವ ನೀಡುವರು.

ಸೈಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ, ಸೈಯದ್ ಅಮೀರ್ ತಂಙಳ್ ಕಿನ್ಯ, ಸೈಯದ್ ಹಬೀಬ್ ತಂಙಳ್ ಸೂರಿಂಜೆ, ಸೈಯದ್ ಇಬ್ರಾಹೀಂ ಬಾತಿಶ್ ತಂಙಳ್ ಆನೆಕಲ್ಲು, ಸೈಯದ್ ಪೂಕುಂಞಿ ಕೋಯ ತಂಙಳ್ ಉದ್ಯಾವರ, ಮಡವೂರ್ ಸಿ.ಎಂ.ವಲಿಯುಲ್ಲಾಹಿ ಯತೀಂ ಖಾನದ ಪ್ರತಿನಿಧಿಗಳಾದ ಕತರ್ ಅಬೂಬಕರ್ ಮೌಲವಿ, ಫೈಝಲ್ ಫೈಝಿ, ಟ.ಪಿ.ಸಿ.ಮುಹಮ್ಮದ್‌ ಕೋಯ ಫೈಝಿ, ಹಾಜಿ ಯು. ಶರಫುದ್ದೀನ್ ಮಾಸ್ಟರ್, ಮುತ್ತಾಡ್ ಅಬ್ದುರ್ರಹ್ಮಾನ್ ಮಾಸ್ಟರ್, ಕೆ.ಎಂ.ಮುಹಮ್ಮದ್ ಮಾಸ್ಟರ್ ಹಾಗೂ ಸಿ.ಎಚ್.ಇಬ್ರಾಹಿಂ ಮುಸ್ಲಿಯಾರ್, ಕೆ.ಎ.ಹಸೈನಾರ್ ಮುಸ್ಲಿಯಾರ್, ಶರೀಫ್ ಮೂಸಾ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಎಂಸಿಎಂಒಇ ಆ್ಯಂಡ್ ಸಿಸಿ ಇದರ ಜೊತೆ ಕನ್ವೀನರ್ ಅಬೂಬಕರ್ ಅನಿಲಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News