ಅಕ್ರಮ ಸಾಗಾಟ: 27 ಜಾನುವಾರು ವಶ
Update: 2017-07-21 21:40 IST
ಕುಂದಾಪುರ, ಜು.21: ಗುಲ್ವಾಡಿ ಗ್ರಾಮದ ಕಾರಿಕುದ್ರು ಎಂಬಲ್ಲಿ ವಾರಾಹಿ ಸೇತುವೆ ಬಳಿ ಇಂದು ಬೆಳಗಿನ ಜಾವ 4ಗಂಟೆ ಸುಮಾರಿಗೆ ಬೊಲೆರೋ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 27 ಜಾನುವಾರುಗಳನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಯಾವುದೇ ಪರವಾನಿಗೆ ಇಲ್ಲದೆ ಇಬ್ಬರು ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದು, ಪೊಲೀಸ್ ದಾಳಿಯ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ. ವಾಹನದಲ್ಲಿದ್ದ 27 ಜಾನುವಾರುಗಳಲ್ಲಿ ಒಂದು ದನ ಮೃತಪಟ್ಟಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.