ಜು.22: ಶಿಕ್ಷಕ-ರಕ್ಷಕರ ಸಮಾವೇಶ
Update: 2017-07-21 21:48 IST
ಮಂಗಳೂರು, ಜು.21: ಸುರತ್ಕಲ್ ಕೃಷ್ಣಾಪುರದ ಅಲ್ ಬದ್ರಿಯಾ ಸಂಯುಕ್ತ ಪದವಿಪೂರ್ವ ಕಾಲೇಜು ಮತ್ತು ಅಲ್ ಬದ್ರಿಯಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ-ರಕ್ಷಕ ಸಮಾವೇಶವು ಜು.22ರಂದು ಮಧ್ಯಾಹ್ನ 1:30ಕ್ಕೆ ಚೊಕ್ಕಬೆಟ್ಟು ಎಂ.ಜೆ.ಎಂ. ಹಾಲ್‌ನಲ್ಲಿ ನಡೆಯಲಿದೆ.
ಅಲ್ ಬದ್ರಿಯಾ ಎಜುಕೇಶನಲ್ ಅಸೋಸಿಯೇಶನ್‌ನ ಅಧ್ಯಕ್ಷ ಅಬೂಬಕರ್ ಕೃಷ್ಣಾಪುರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕೃಷ್ಣಾಪುರ 7ನೆ ವಿಭಾಗದ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಬಿ.ಎಂ.ಹಸೇನ್ ಭಾಗವಹಿಸಲಿದ್ದಾರೆ. ಮಂಗಳೂರಿನ ಫಾದರ್‌ಮುಲ್ಲರ್ ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜು ಇದರ ಆಪ್ತ ಸಮಾಲೋಚಕರಾದ ರೀಮಾ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.