×
Ad

​‘ಆಳ್ವಾಸ್ ಎಂಬಿಎ ಕಾರ್ಪೋರೇಟ್ ಲೋಕಕ್ಕೆ ಹೆಬ್ಬಾಗಿಲು’

Update: 2017-07-21 22:12 IST

ಉಡುಪಿ, ಜು.21: ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತಕ್ಕೊಳಪಟ್ಟ ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗವು ತನ್ನದೇ ಆದ ವೈಶಿಷ್ಟತೆಗಳಿಂದ ಜನಮನ್ನಣೆ ಗಳಿಸಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಮ್ಯಾನೇಜ್ಮೆಂಟ್ ಶಿಕ್ಷಣ ದೊರೆಯುವಂತಾಗಿದೆ ಎಂದು ಕಾಲೇಜಿನ ಎಂಬಿಎ ವಿಭಾಗದ ಡೀನ್ ಪ್ರೊ. ಪಿ.ರಾಮಕೃಷ್ಣ ಚಡಗ ತಿಳಿಸಿದ್ದಾರೆ.

ಉಡುಪಿಯಲ್ಲಿಂದ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಳ್ವಾಸ್ ಎಂಬಿಎ ವಿಭಾಗವು ಆರಂಭಗೊಂಡ ಒಂಭತ್ತು ವರ್ಷಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. 2016-17ನೇ ಸಾಲಿನ ಶೇ.85 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದ ಮೂಲಕ ದೇಶ-ವಿದೇಶಗ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗಗಳನ್ನು ಪಡೆದಿದ್ದಾರೆ ಎಂದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ ಸೇರಿದ ಆಳ್ವಾಸ್ ಎಂಬಿಎ ವಿಭಾಗದ 2015ನೇ ಸಾಲಿನಲ್ಲಿ ಬಿಂದು ಸಪ್ಮೋತ ನಾಲ್ಕನೇ ರ್ಯಾಂಕ್ ಪಡೆದಿದ್ದರು. ಎಂಬಿಎ ವಿಭಾಗದಲ್ಲಿ ನುರಿತ ಅನುಭವಿ ಪ್ರಾಧ್ಯಾಪಕರಿದ್ದು ಇಸ್ರೋದ ನಿವೃತ್ತ ಇಂಜಿನಿಯರ್ ಪ್ರೊ.ಚಡಗ ಡೀನ್ ಆಗಿದ್ದರೆ, ಅನುಭವ ಪ್ರಾಧ್ಯಾಪಕ ಏರ್‌ವೈಸ್ ಮಾರ್ಷಲ್ ಕೆ.ರಮೇಶ್ ಕಾರ್ಣಿಕ್, ಡಾ.ಜೋಷಿ ಮುಂತಾದವರು ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತಿದ್ದಾರೆ.

ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ವರ್ಕ್, ಸೆಮಿನಾರ್, ಪ್ರಾತ್ಕ್ಷಿಕೆ, ಕಾರ್ಯಾಗಾರ ಗಳ ಮೂಲಕ ಹತ್ತು ಹಲವು ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಪ್ರತಿ ವರ್ಷ ರಾ.ಮಟ್ಟದ ವಿಚಾರಸಂಕಿರಣಗಳನ್ನು ನಡೆಸಲಾಗುತ್ತಿದೆ. ಪಠ್ಯೇತರ ಚಟುವಟಿಕೆಗಳಿಗೂ ವಿಶೇಷ ಆದ್ಯತೆಯನ್ನು ನೀಡಲಾಗುತ್ತಿದೆ ಎಂದು ಪ್ರೊ. ಚಡಗ ತಿಳಿಸಿದರು.

ಈ ಬಾರಿ ಕಾಲೇಜಿನಲ್ಲಿ ಆಯೋಜಿಸಲಾದ ಉದ್ಯೋಗ ಮೇಳ ‘ಪ್ರಗತಿ ಮೇಳ’ದಲ್ಲಿ 200ಕ್ಕೂ ಅಧಿಕ ಪ್ರಮುಖ ಕಂಪೆನಿಗಳು ಭಾಗವಹಿಸಿದ್ದು, 20,000ಕ್ಕೂ ಅಧಿಕ ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾಲೇಜಿನ 200ಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಇಲ್ಲಿ ಉದ್ಯೋಗ ಪಡೆದಿದ್ದಾರೆ ಎಂದವರು ನುಡಿದರು.

ಕಾಲೇಜಿಗೆ ಉತ್ತಮ ಸುಸಜ್ಜಿತವಾದ ಹಾಸ್ಟೆಲ್ ಸೌಲಭ್ಯಗಳನ್ನು ಹೊಂದಿರುವ ಕ್ಯಾಂಪಸ್ ಇದ್ದು, ಉಚಿತ ವೈ-ಫೈ ಸೌಲಭ್ಯ, ಸಾರಿಗೆ ಸೌಲಭ್ಯ ಹಾಗೂ ಫುಡ್‌ಕೋರ್ಟ್ ಸೌಲಭ್ಯವೂ ಲಭ್ಯವಿದೆ. ಪ್ರಥಮ ವರ್ಷದಲ್ಲಿ 120 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದ್ದು, ಈಗಾಗಲೇ ಮ್ಯಾನೇಜ್‌ಮೆಂಟ್‌ನ 60 ಸೀಟುಗಳಿಗೆ ವಿದ್ಯಾರ್ಥಿಗಳ ಸೇರ್ಪಡೆಗೊಂಡಿದ್ದಾರೆ. ಸರಕಾರಿ ಕೋಟಾಕ್ಕೆ ಆಯ್ಕೆ ನಡೆಯುತ್ತಿದೆ ಎಂದವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗುರುದತ್ ಸೋಮಯಾಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News