×
Ad

ನಾಯಕತ್ವ, ಸಮುದಾಯ ಅಬಿವೃದ್ದಿ ತರಬೇತಿ

Update: 2017-07-21 22:37 IST

ಉಡುಪಿ, ಜು.21: ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರದ ಉಡುಪಿ ಶಾಖೆ ಜಿಲ್ಲೆಯ 3 ತಾಲೂಕುಗಳಲ್ಲಿ ನಾಯಕತ್ವ ಹಾಗೂ ಸಮುದಾಯ ಅಭಿವೃದ್ದಿ ತರಬೇತಿಯನ್ನು ಹಮ್ಮಿಕೊಳ್ಳಲಿದೆ.

ತರಬೇತಿ ಕಾರ್ಯಕ್ರಮ 5 ದಿನಗಳ ಕಾಲ ನಡೆಯಲಿದ್ದು, ಶಿಬಿರಾರ್ಥಿಗಳು ಶಿಬಿರದಲ್ಲೇ ಇರಬೇಕಾಗಿದೆ. ಶಿಬಿರಾರ್ಥಿಗಳ ಊಟ, ಉಪಹಾರ ಮತ್ತು ವಸತಿ ವ್ಯವಸ್ಥೆಯನ್ನು ನೆಹರು ಯುವ ಕೇಂದ್ರವು ಭರಿಸಲಿದೆ. ಇದರಲ್ಲಿ ನಾಯಕತ್ವ, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯ ಕಾರ್ಯಕ್ರಮ ನಿರ್ವಹಣೆ, ಕೇಂದ್ರ ಸರಕಾರದ ಯೋಜನೆಗಳು, ಜೀವನ ಕೌಶಲ್ಯ ತರಬೇತಿ ಹೀಗೆ ಹಲವು ವಿಷಯಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಇರುತ್ತದೆ.

ಜಿಲ್ಲೆಯ ಆಸಕ್ತ 18ರಿಂದ 29 ವರ್ಷದೊಳಗಿನ ಯುವಕ, ಯುವತಿ ಮಂಡಳದ ಸದಸ್ಯರು ತಮ್ಮ ಹೆಸರುಗಳನ್ನು ನೆಹರು ಯುವ ಕೇಂದ್ರ, ರಜತಾದ್ರಿ, ಜಿಲ್ಲಾಧಿಕಾರಿ ಕಛೇರಿ ಆವರಣ, ಮಣಿಪಾಲ, ಉಡುಪಿ ಇಲ್ಲಿ ಆ.9ರೊಳಗೆ ನೊಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ:0820-2574992ನ್ನು ಸಂಪರ್ಕಿಸಬಹುದು ಎಂದು ನೆಹರು ಯುವ ಕೇಂದ್ರದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News