ಜಿಲ್ಲಾ ಯುವ ಮಂಡಳಿ ಪ್ರಶಸ್ತಿಗೆ ಅರ್ಜಿ ಆಹ್ವಾನ
ಉಡುಪಿ, ಜು.21: ನೆಹರು ಯುವ ಕೇಂದ್ರ ಉಡುಪಿ ಇವರಿಂದ 2016- 17ನೇ ಸಾಲಿಗೆ ಜಿಲ್ಲಾ ಯುವ ಮಂಡಳಿ ಪ್ರಶಸ್ತಿಗೆ ಅರ್ಜಿಯನ್ನು ಆಹ್ವಾನಿಸ ಲಾಗಿದೆ. ಜಿಲ್ಲೆಯ ಆಸಕ್ತ ಯುವಕ-ಯುವತಿ ಮಂಡಳಗಳು ಅರ್ಜಿ ಸಲ್ಲಿಸಬಹುದು. ಯುವ ಮಂಡಳಗಳು ಜಿಲ್ಲಾ ನೊಂದಾಣಾಧಿಕಾರಿಗಳ ಕಛೇರಿಯಲ್ಲಿ ನೋಂದಾವಣೆಯಾಗಿದ್ದು, ನೆಹರು ಯುವ ಕೇಂದ್ರದಲ್ಲಿ ಸಂಯೋಜನೆ ಹೊಂದಿ ರಬೇಕು. ಕಳೆದ 2016-17ನೇ ಸಾಲಿನಲ್ಲಿ ಗ್ರಾಮದ ಅಭಿವೃದ್ದಿಗಾಗಿ ಜನಪರ ಕಾರ್ಯಕ್ರಮಗಳನ್ನು ನಡೆಸಿರಬೇಕು. (ಸಾಕ್ಷಾರತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳು, ಪರಿಸರ ಸಂರಕ್ಷಣೆ, ಕ್ರೀಡೆ, ಸಾಂಸ್ಕೃತಿಕ, ಮಹಿಳಾ ಜಾಗೃತಿ, ವೃತ್ತಿಪರ ಶಿಕ್ಷಣ, ಗ್ರಾಮ ನೈರ್ಮಲ್ಯ, ಮಳೆ ನೀರು ಸಂಗ್ರಹ, ರಾಷ್ಟ್ರೀಯ ಹಾಗೂಅಂತಾರಾಷ್ಟ್ರೀಯ ದಿಗಳಆಚರಣೆ, ಶ್ರಮದಾನ ಇತ್ಯಾದಿ)
ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಯುವ ಮಂಡಳಕ್ಕೆ 25,000ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ತಂಡ ರಾಜ್ಯಮಟ್ಟಕ್ಕೆ ಅರ್ಹತೆ ಪಡೆಯುತ್ತದೆ. ಅರ್ಜಿಯನ್ನು ನೆಹರು ಯುವ ಕೇಂದ್ರ,ರಜತಾದ್ರಿ, ಜಿಲ್ಲಾಧಿಕಾರಿ ಕಛೇರಿ ಆವರಣ, ಮಣಿಪಾಲ ಕಚೇರಿಯಿಂದ ಪಡೆಯಬಹುದು. ಅರ್ಜಿ ಸಲ್ಲಿಸಲು ಆ.21 ಕೊನೆಯ ದಿನವಾಗಿದ್ದು, ಹೆಚ್ಚಿನ ವಿವರಗಳಿಗೆ 0820-2574992ನ್ನು ಸಂಪರ್ಕಿಸಬಹುದು ಎಂದು ನೆಹರು ಯುವ ಕೇಂದ್ರದ ಪ್ರಕಟಣೆ ತಿಳಿಸಿದೆ.