ತುಂಬೆ ನೂತನ ವೆಂಟೆಡ್ ಡ್ಯಾಂ ಬಳಿಯ ಆವರಣ ಗೋಡೆ ಕುಸಿತ
Update: 2017-07-21 23:21 IST
ಬಿ.ಸಿ.ರೋಡು, ಜು. 21: ಬಂಟ್ವಾಳ ತಾಲೂಕಿನ ಮಹಾನಗರ ಪಾಲಿಕೆ ವ್ಯಾಪ್ತಿಯ ಜನತೆಗೆ ಕುಡಿಯುವ ನೀರು ಸಮಸ್ಯೆ ನೀಗಿಸಲು ತುಂಬೆಯಲ್ಲಿ ನಿರ್ಮಾಣವಾಗಿರುವ ನೂತನ ವೆಂಟೆಡ್ ಡ್ಯಾಂನ ಪಕ್ಕದಲ್ಲಿ ಇರುವ ಹಳೆಯ ಜ್ಯಾಕ್‌ವೆಲ್‌ನ ಭದ್ರತಾಗೋಡೆ ಕುಸಿದು ಬಿದ್ದಿದೆ. ಇದರಿಂದ ನೂತನವಾಗಿ ನಿರ್ಮಾಣಗೊಂಡ ಡ್ಯಾಂಗೆ ಏನೂ ತೊಂದರೆ ಇಲ್ಲ ಹಾಗೂ ಮಂಗಳೂರಿನ ಜನತೆಗೆ ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿಗೆ ಏನೂ ಅಡ್ಡಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 50 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಈ ಆವರಣ ಗೋಡೆಯು ಎಡೆಬಿಡದೆ ಸುರಿದ ಮಳೆಯಿಂದಾಗಿ ನೀರಿನ ಸೆಳವು ಜಾಸ್ತಿ ಆದ ಕಾರಣ ಕುಸಿದಿದೆ. ಸುದ್ದಿ ತಿಳಿದಾಕ್ಷಣ ಕರ್ನಾಟಕ ಜಲಮಂಡಳಿಯ ಕಾರ್ಯಪಾಲಕ ಇಂಜಿನಿಯರ್ ಮಹದೇವಯ್ಯ, ಸಹಾಯಕ ಕಾರ್ಯಪಾಲಕ ಲಿಂಗರಾಜು ಮತ್ತು ಶೋಭಾಲಕ್ಷ್ಮೀ, ಜೂನಿಯರ್ ಇಂಜಿನಿಯರ್ ಶೇಖರ್ ಸ್ಥಳಕ್ಕೆ ಬಂದು ಮಹಾನಗರ ಪಾಲಿಕೆಯ ಇಂಜಿನಿಯರ್‌ಗೆ ಮಾಹಿತಿ ನೀಡಿ ತೊಂದರೆಯನ್ನು ಸರಿಪಡಿಸುವುದಾಗಿ ತಿಳಿಸಿದ್ದಾರೆ.